- ಬಿಹಾರ ಮೂಲದ ವೈದ್ಯೆ ಜತೆ ವಿವಾಹ
ಚೆನ್ನೈ: ಸದಾ ಸುದ್ದಿಯಲ್ಲಿರುವ ನಟ, ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ಪ್ರಭುದೇವ ರಹಸ್ಯವಾಗಿ ವೈದ್ಯೆಯೊಬ್ಬರ ಜತೆ ಎರಡನೇ ವಿವಾಹ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಿಹಾರದ ಫಿಸಿಯೋಥೆರಪಿಸ್ಟ್ ವೈದ್ಯೆ ಜೊತೆ ಸೆಪ್ಟಂಬರ್ನಲ್ಲಿ ಸಪ್ತಪದಿ ತುಳಿದಿದ್ದಾರಂತೆ. ಮುಂಬೈನಲ್ಲಿರುವ ಪ್ರಭುದೇವ ಅವರ ನಿವಾಸದಲ್ಲಿ ರಹಸ್ಯವಾಗಿ ವಿವಾಹ ಮಾಡಿಕೊಂಡಿರುವ ಈ ಜೋಡಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಪ್ರಭುದೇವ ಅವರ ಸಮೀಪವರ್ತಿಯೊಬ್ಬರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪ್ರಭುದೇವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ.
ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಭುದೇವ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯೆಯನ್ನೇ ಪ್ರೀತಿಸಿ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಪ್ರಭುದೇವ 1995ರಲ್ಲಿ ರಾಮಲತಾರನ್ನು ವಿವಾಹವಾಗಿದ್ದರು. 2011ರಲ್ಲಿ ವಿಚ್ಚೇದನ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ನಂತರ ನಾಯಕಿ ನಟಿ ನಯನತಾರಾ ಅವರೊಂದಿಗೆ ಪ್ರಭುದೇವ ಹೆಸರು ತಳುಕು ಹಾಕಿಕೊಂಡಿದ್ದು ಬಳಿಕ ಅದು ವದಂತಿ ಎನ್ನಲಾಗಿತ್ತು.