ರಾಜ್ಯದ ಅನ್ನದಾತರಿಗೆ ಗುಡ್ ನ್ಯೂಸ್..!
– ರೈತ ಸಿರಿ ಯೋಜನೆಯಡಿ ಸಿಗಲಿದೆ 10,000 ರೂ. ಪ್ರೋತ್ಸಾಹಧನ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಗಾರರಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಊದಲು, ನವಣೆ, ಹಾರಕ, ಕೂರಲೆ, ಸಾಮೆ ಮತ್ತು ಬರಗು (ರಾಗಿ, ಜೋಳ ಮತ್ತು ಸಜ್ಜೆ ಹೊರತುಪಡಿಸಿ) ಬೆಳೆಗಳನ್ನು ಬೆಳೆಯುವ ರೈತರಿಗೆ ಒಂದು ಹೆಕ್ಟೇರಿಗೆ ಹತ್ತು ಸಾವಿರ ರೂ.ಗಳಂತೆ ಎರಡು ಹೆಕ್ಟೇರವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಸಣ್ಣ ಅಥವಾ ಮಧ್ಯಮ ಗಾತ್ರದ ರೈತ (2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವವರು) ಅರ್ಹರು. ಹೆಚ್ಚಿನ ಮಾಹಿತಿಗಾಗಿ
https://raitamitra.karnataka.gov.in/info-2 /Raita+Siri/en ಭೇಟಿ ನೀಡಬಹುದು.