ಏ. 1, 2ರಂದು ಪೋಸ್ಟ್ ಆಫೀಸ್ ಸೇವೆ ಲಭ್ಯವಿಲ್ಲ
– ವ್ಯವಹಾರ, ಬ್ಯಾಂಕಿಂಗ್ ಸೇವೆ ಇರುವುದಿಲ್ಲ
NAMMUR EXPRESS NEWS
ಅಂಚೆ ಕಚೇರಿಗಳಲ್ಲಿ ಏಪ್ರಿಲ್ 1 ಸೋಮವಾರ ಮತ್ತು 2 ಮಂಗಳವಾರದಂದು ಬ್ಯಾಂಕಿಂಗ್ ಸೇವೆ ಲಭ್ಯವಿರುವುದಿಲ್ಲ. ವರ್ಷಾಂತ್ಯದ ಲೆಕ್ಕಾಚಾರಗಳು ಮತ್ತು ಬಡ್ಡಿ ಲೆಕ್ಕಾಚಾರಗಳು ನಡೆಯಲಿರುವುದರಿಂದ ಏ. 1 ಮತ್ತು 2 ರಂದು ಅಂಚೆ ವಿಭಾಗದ ಯಾವುದೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ವ್ಯವಹಾರ, ಬ್ಯಾಂಕಿಂಗ್ ಸೇವೆ ಇರುವುದಿಲ್ಲ. ಇದನ್ನು ಹೊರತುಪಡಿಸಿ ಪತ್ರದ ಅಂಚೆ ಸೇವೆ, ಎಟಿಎಂ ಸೇವೆ ನಿರಂತರವಾಗಿರುತ್ತದೆ ಎಂದು ಹೇಳಲಾಗಿದೆ.