ಶಿವಮೊಗ್ಗ ಕ್ಷೇತ್ರಕ್ಕೆ ಪ್ರಜಾಕೀಯ ಪಕ್ಷದಿಂದ ಅರುಣ್ ಕಾನಳ್ಳಿ ಕಣಕ್ಕೆ.!
– ಉಪೇಂದ್ರ ನೇತೃತ್ವದ ಪಕ್ಷದಿಂದ ಬಿ ಫಾರ್ಮ್ ಪಡೆದ ಅಭ್ಯರ್ಥಿ
– ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ: ಸಾಮಾಜಿಕ ಹೋರಾಟದಲ್ಲೂ ಮುಂಚೂಣಿ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಈಗಾಗಲೇ ಬಿಜೆಪಿಯಿಂದ ಹಾಲಿ ಸಂಸದ ಬಿ ವೈ ರಾಘವೇಂದ್ರ, ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಈ ನಡುವೆ ಬಿಜೆಪಿ ಬಂಡಾಯವಾಗಿ ಈಶ್ವರಪ್ಪ ಸ್ಪರ್ಧೆ ಕೂಡ ಕುತೂಹಲ ಮೂಡಿಸಿರುವ ನಡುವೆ, ಈಗ ಮತ್ತಷ್ಟು ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಈ ಸಾಲಿನಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷದಿಂದ ತೀರ್ಥಹಳ್ಳಿ ಭಾಗದ ಯುವ ಮುಖಂಡ ಅರುಣ್ ಕಾನಳ್ಳಿ ಸ್ಪರ್ಧೆ ಮಾಡಿದ್ದಾರೆ.
ಉಪೇಂದ್ರ ಅವರಿಂದ ಟಿಕೆಟ್ ಪಡೆದ ಯುವ ಹೋರಾಟಗಾರ!
ಬೆಂಗಳೂರಿನಲ್ಲಿ ಉಪೇಂದ್ರ ಅವರಿಂದ ಬಿ ಫಾರ್ಮ್ ಪಡೆದ ಅರುಣ್ ಕಾನಳ್ಳಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಶುರು ಮಾಡಿದ್ದಾರೆ. ತಮ್ಮ ವಿಭಿನ್ನ ಪ್ರಚಾರದಲ್ಲೇ ಗಮನ ಸೆಳೆದಿರುವ ಅರುಣ್ ಕಾನಳ್ಳಿ ಹಳ್ಳಿ-ಹಳ್ಳಿಗಳಲ್ಲೂ ತಮ್ಮ ಪಕ್ಷದ ಹಾಗೂ ಸೇವೆಯ ಬಗ್ಗೆ ಪೋಸ್ಟರ್ ಗಳನ್ನು ಅಂಟಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಜನಪರವಾದಂತ ಕೆಲಸವನ್ನು ಮಾಡುವ ಭರವಸೆಯೊಂದಿಗೆ ಜನರ ಮುಂದೆ ಹೋಗಿದ್ದಾರೆ. ಅರುಣ್ ಕಾನಳ್ಳಿ ಕಳೆದ ಒಂದು ದಶಕದಿಂದ ತೀರ್ಥಹಳ್ಳಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ.