ಸಿಂಪಲ್ ರಾಜಕಾರಣಿ ಪ್ರಸನ್ನಕುಮಾರ್ ಕಾಂಗ್ರೆಸ್ ಅಧ್ಯಕ್ಷ!
– ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನಲ್ಲಿ ಮೇಜರ್ ಸರ್ಜರಿ
– 7 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರು ಬದಲು ಮಾಡಿದ ಕಾಂಗ್ರೆಸ್
NAMMUR EXPRESS NEWS
ಶಿವಮೊಗ್ಗ/ಉಡುಪಿ: ಶಿವಮೊಗ್ಗ, ಉಡುಪಿ ಸೇರಿದಂತೆ 7 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷ ಬದಲು ಮಾಡಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಲೋಕಸಭಾ ಚುನಾವಣೆ 2024 ರ ಎಲೆಕ್ಷನ್ ಸಂದರ್ಭದಲ್ಲಿಯೇ ಮತ್ತೊಂದು ದೊಡ್ಡ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಅಧ್ಯಕ್ಷರನ್ನಾಗಿ ಆರ್ ಪ್ರಸನ್ನ ಕುಮಾರ್ರವರನ್ನ ತರಲಾಗಿದೆ. ಈ ಸಂಬಂಧ ಕೆಪಿಸಿಸಿ ಸೋಮವಾರ ಆದೇಶವನ್ನು ಹೊರಡಿಸಿದೆ. ಈ ಸಂಬಂಧ ಎಐಸಿಸಿಯಿಂದ ಪ್ರಕಟಣೆಯನ್ನ ನೀಡಲಾಗಿದ್ದು ಕೆಸಿ ವೇಣುಗೋಪಾಲ್ ರವರ ಲೆಟರ್ ಹೆಡ್ ಮೂಲಕ ಪ್ರಕಟಣೆಯನ್ನು ನೀಡಲಾಗಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ರಾಜ್ಯದ 7 ಜಿಲ್ಲೆಗಳ ಅಧ್ಯಕ್ಷರನ್ನು ಬದಲು ಮಾಡಲಾಗಿದೆ.
7 ಜಿಲ್ಲೆಗಳಿಗೆ ಹೊಸ ಸಾರಥಿಗಳು!
ಬಳ್ಳಾರಿ ನಗರ – ಪ್ರಶಾಂತ್ ಅಲ್ಲಂ ವೀರಭದ್ರಪ್ಪ
ಬೆಂಗಳೂರು ಪೂರ್ವ -ಕೆ.ನಂದಕುಮಾರ್
ಹಾವೇರಿ – ಸಂಜೀವಕುಮಾರ ನೇರಲಂಗಿ
ಕೊಪ್ಪಳ- ಅಮರೇಗೌಡ ಬಯ್ಯಾಪುರ
ಉಡುಪಿ- ಕಿಶನ್ ಹೆಗ್ಡೆ
ರಾಯಚೂರು- ಬಸವರಾಜ ಇಟಗಿ
ಶಿವಮೊಗ್ಗ- ಆರ್ ಪ್ರಸನ್ನ ಕುಮಾರ್
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸುಂದರೇಶ್
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಪಕ್ಷ ಸಂಘಟಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿನ ಆಂತರಿಕ ಕಲಹಗಳನ್ನು ತಣ್ಣಗಾಗಿಸಿ ಗುಂಪುಗಾರಿಕೆಯನ್ನು ತಡೆಗಟ್ಟಿ ತನ್ನದೇ ಆದ ವಾಕ್ ಚಾತುರ್ಯದಿಂದ ಚತುರತೆಯಿಂದ ಅಧಿಕಾರ ಇಲ್ಲದಿದ್ದ ಸಮಯದಲ್ಲೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡವರು ಸುಂದರೇಶ್ ಕಾಂಗ್ರೆಸ್ ಅಚ್ಚುಮೆಚ್ಚಿನ ಅಧ್ಯಕ್ಷರಾಗಿದ್ದ ಹೆಚ್ ಎಸ್ ಸುಂದರೇಶ್ ಸೂಡ ಅಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೆ ಆ ಸ್ಥಾನಕ್ಕೆ ಒಬ್ಬ ಜಿಲ್ಲಾಧ್ಯಕ್ಷರ ನೇಮಕವಾಗಬೇಕಿತ್ತು ಈಗ ಆ ಸ್ಥಾನಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಅವರ ನೇಮಕವಾಗಿದೆ.
ದೊಡ್ಡ ಜವಾಬ್ದಾರಿ ಪ್ರಸನ್ನ ಕುಮಾರ್ ಹೆಗಲಿಗೆ!
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ರಾಷ್ಟ್ರೀಯ ಪಕ್ಷವಾದರೂ ಕೂಡ ಮೂಲ ಕಾಂಗ್ರೆಸ್ಸಿಗರು ಹಾಗೂ ಇತ್ತೀಚಿಗೆ ಬಂದ ಕಾಂಗ್ರೆಸ್ಸಿಗರು ಎಂಬ ಬಣಗಳಿವೆ. ಈ ಬಣಗಳನ್ನು ನಿಭಾಯಿಸಿಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ ಅದನ್ನು ಸುಂದರೇಶ್ ಯಶಸ್ವಿಯಾಗಿ ಮಾಡಿದ್ದರು. ಸಹಕಾರಿ ನಾಯಕ ಡಾ.ಆರ್ ಎಂ ಮಂಜುನಾಥ್ ಗೌಡರು, ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ನಂತರ ಈಗ ಕಾಂಗ್ರೆಸ್ಗೆ ಬಂದಿರುವ ಎಂ ಶ್ರೀಕಾಂತ್, ಕಲಗೋಡು ರತ್ನಾಕರ್ ಜಿಲ್ಲಾಧ್ಯಕ್ಷ ಸ್ಥಾನ ನಿರಾಕರಿಸಿದ್ದರು. ಇದೀಗ ಎಲ್ಲಾ ಜವಾಬ್ದಾರಿ ಪ್ರಸನ್ನ ಕುಮಾರ್ ಹೆಗಲಿಗೆ ಬಿದ್ದಿದೆ.