– ರಣ ಬಿಸಿಲಿಗೆ ಬೆಂದ ಕಾಫಿಗಿಡಗಳು, ಅಡಿಕೆ ಗಿಡಗಳು
– ಮಳೆಗಾಗಿ ದೇವರ ಮೊರೆ ಹೋದ ಜನ
– ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಮಲೆನಾಡಿಗರು
NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ಮಳೆಯಿಲ್ಲದೆ ರಾಜ್ಯದಲ್ಲಿನ ಅನ್ನದಾತ, ಜನರು ಕಂಗಾಲಾಗಿದ್ದಾರೆ. ಇನ್ನು 2024ರ ಏಪ್ರಿಲ್ ಕಳೆದರೂ ಯಾವುದೇ ಮಳೆಯ ಮುನ್ಸೂಚನೆ ಇಲ್ಲದೆ, ಬಿಸಿಲಿನ ವಾತಾವರಣ ಮುಂದುವರೆದಿದೆ. ಇದರಿಂದ ರಾಜ್ಯದ ಜನರು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಮಲೆನಾಡಲ್ಲಿ ಅಡಿಕೆ, ಕಾಫಿ ತೋಟಗಳು ನೀರಿಲ್ಲದೆ ಒಣಗಿ ನಿಂತಿವೆ. ಇದ್ದ ಬೋರ್ವೆಲ್ಗಳು ಕೂಡ ನಿಂತುಹೋಗುವ ಹಂತವನ್ನು ತಲುಪಿದ್ದು, ಹಲವೆಡೆ ಜನರು ಮಳೆಗಾಗಿ ದೇವರವ ಮೊರೆ ಹೋಗುತ್ತಿರುವ ಘಟನೆಗಳನ್ನು ನಡೆಯುತ್ತಿದೆ.
ಹಿಂದೆಲ್ಲ ಮಲೆನಾಡು ಮಳೆನಾಡು ಆಗಿರುತ್ತಿತ್ತು. ಆದರೆ ಇದೀಗ ಬಿಸಿಲಿನ ನಾಡಾಗಿದ್ದು, ಕಾಫಿನಾಡಿನ ಜನರು ಬೆಳೆ ಕಳೆದುಕೊಳ್ಳುವ ಆತಂಕಲಿದ್ದಾರೆ. ಜನರು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಮಲೆನಾಡು ಜಿಲ್ಲೆಯ ಬಹುತೇಕ ಭಾಗಗಲ್ಲಿ ಮಳೆ ಇಲ್ಲದೆ ನದಿ, ತೊರೆಗಳು ಬತ್ತಿ ಹೋಗುವ ಹಂತವನ್ನು ತಲುಪಿವೆ. ಮತ್ತೊಂದೆಡೆ ಕಾಫಿ ತೋಟಗಳು ಕೂಡ ಸೂರ್ಯನ ಶಾಖಕ್ಕೆ ಒಣಗುತ್ತಿದ್ದು, ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಳೆದ 15 ವರ್ಷಗಳ ಬಳಿಕ ತೀವ್ರ ಮಳೆಯ ಕೊರತೆ ಎದುರಾಗಿದೆ.
ಸಾವಿರ ಅಡಿ ಕೊರೆದರೂ ನೀರು ಬಾರದ ಬೋರ್!
ಮಲೆನಾಡಲ್ಲಿ ಜಲ ಮೂಲ ಚೆನ್ನಾಗಿತ್ತು. ಆದರೆ ಅತಿಯಾದ ಅರಣ್ಯ ನಾಶ, ಪರಿಸರ ಹಾನಿ ಇದೀಗ ನೀರು ಬತ್ತುವಂತೆ ಮಾಡಿದೆ. ಈಗ ಸಾವಿರಾರು ಅಡಿ ಕೊರೆದರೂ ನೀರು ಬರುತ್ತಿಲ್ಲ.