- ಜನಾಂಗದ ದನಿಗೆ ಅಶ್ವತ್ಥನಾರಾಯಣ, ಹಾಲಪ್ಪ ಸಾಥ್
ಬೆಳಗಾವಿ: ಲಿಂಗಾಯತ ನಿಗಮದ ಬಳಿಕ ಸರ್ಕಾರಕ್ಕೆ ಅನೇಕ ಜಾತಿಗಳು ತಮ್ಮ ಜನಾಂಗದ ನಿಗಮ ರಚಿಸ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಇಡುತ್ತಿವೆ. ಈ ನಡುವೆ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ರಚಿಸಬೇಕು. ತಕ್ಷಣವೇ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಮಾಡಲು ನಾನು ಒತ್ತಾಯಿಸುತ್ತೇನೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಇತ್ತ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಪ್ರಭಾವಿ ಸಮುದಾಯವಾಗಿರುವ ಈಡಿಗ ಸಮುದಾಯ ಕೂಡ ಹಾಲಪ್ಪ ನೇತೃತ್ವದಲ್ಲಿ ಈಡಿಗ ಅಭಿವೃದ್ಧಿ ನಿಗಮ ರಚಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿತ್ತು.
ಬೆಳಗಾವಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಮರಾಠರು ಕೂಡ ಕನ್ನಡಿಗರು, ಕನ್ನಡ ನಾಡಿನಲ್ಲಿರುವಂಥವರು. ಅವರಿಗೆ ಹಕ್ಕಿದೆ. ಹಾಗಾಗಿ ಅವರಿಗೆ ನಿಗಮ ರಚನೆ ಮಾಡಿದ್ದೇವೆ. ಈ ನಾಡು ಎಲ್ಲರಿಗೆ ಸೇರಿದ್ದು. ಎಲ್ಲಾ ಸಮುದಾಯಕ್ಕೆ ನಿಗಮ ಕೊಡಬೇಕು ಎಂದಿದ್ದಾರೆ.