ಸಿಂಪಲ್ ಮ್ಯಾನ್ ಕೋಟಾ ಕೂಡಾ ಕೋಟ್ಯಾಧಿಪತಿ!
– ತಮ್ಮ ಹಾಗೂ ಕುಟುಂಬದ ಬಳಿ ಆಸ್ತಿ ಘೋಷಣೆ
– ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ
– 1 ಕೋಟಿ ಸಾಲ: ಮೂವರು ಮಕ್ಕಳ ಹೆಸರಲ್ಲೂ ಆಸ್ತಿ!
NAMMUR EXPRESS NEWS
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ನಮ್ಮ ನಾಮಪತ್ರವನ್ನು ಸಲ್ಲಿಸಿದ್ದು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಸಿಂಪಲ್ ಮ್ಯಾನ್ ಎಂದೇ ಹೆಸರಾಗಿರುವ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರದ ಜೊತೆ ತಮ್ಮ ಆಸ್ತಿ ವಿವರ ಅಫಿಡವಿಟ್ ನಲ್ಲಿ ಅವರ ಕುಟುಂಬ 3.5 ಕೋಟಿ ಒಡೆಯರಾಗಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಕೋಟ ಶ್ರೀನಿವಾಸ್ ಅವರಿಗಿಂತಲೂ ಅವರ ಪತ್ನಿ ಶಾಂತಾ ಅವರೇ ಸಿರಿವಂತರಾಗಿದ್ದಾರೆ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಕೋಟ ಶ್ರೀನಿವಾಸ ಪೂಜಾರಿ , ಒಂದು ಕೋಟಿ ರೂಪಾಯಿ ಸಾಲದಲ್ಲಿದ್ದಾರೆ. ಇವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ತಮ್ಮ ಅಫಿಡವಿಟ್ ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ನಿ ಶಾಂತಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಆಸ್ತಿ ವಿವರ
ಚರಾಸ್ಥಿ: ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ನಗದು ,ಚಿನ್ನ ವಾಹನ ಸೇರಿದಂತೆ ಒಟ್ಟು ರೂ. 31,95,082 ಮೌಲ್ಯದ ಚರಾಸ್ತಿ ಇದ್ದು , ಇನ್ನು ಅವರ ಪತ್ನಿ ಶಾಂತಾ ಅವರ ಬಳಿ 10,29,027 ಮೌಲ್ಯದ ಚರಾಸ್ತಿ ಹಾಗೂ ಮೂವರು ಮಕ್ಕಳು 21,96,401 ಬಳಿ ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು- 64,20,510 ಲಕ್ಷ ಮೌಲ್ಯದ ಚರಾಸ್ತಿ ಇದೆ
ಕೋಟ ಶ್ರೀನಿವಾಸ್ ಬಳಿ 10 ಗ್ರಾಂ ನ 1 ಚಿನ್ನದ ಉಂಗುರ, ಪತ್ನಿ ಬಳಿ 150 ಗ್ರಾಂ ಚಿನ್ನ-9,57,000 ಮಕ್ಕಳ ಬಳಿ ರೂ. 4,46,700 ಮೌಲ್ಯದ ಚಿನ್ನ ಇದೆ.ಮಾರುತಿ ಆಲ್ಟೋ ಕಾರು 2006 ಮಾಡೆಲ್- ರೂ1,50,000, ಇನ್ನೋವಾ ಕಾರು 2016 ಮಾಡೆಲ್ 22,00,000, ಮಗನ ಹೆಸರಿನಲ್ಲಿ ರೂ. 16.5 ಲಕ್ಷ ಮೌಲ್ಯದ ಹೋಂಡಾ ಸಿಟಿ ಕಾರು ಇದೆ.
ಸ್ಥಿರಾಸ್ತಿ: (ಭೂಮಿ,ಕೃಷಿಭೂಮಿ ಮತ್ತು ಕಟ್ಟಡ ಸೇರಿ ಸದ್ಯದ ಮಾರುಕಟ್ಟೆ ದರ)ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ರೂ. 79,95,082 ಮೌಲ್ಯದ ಸ್ತಿರಾಸ್ಥಿ, ಶಾಂತಾ ಅವರ ಬಳಿ 1,62,79,027 ಮೌಲ್ಯದ ಸ್ತಿರಾಸ್ಥಿ, ಮಕ್ಕಳ ಹೆಸರಿನಲ್ಲಿ ರೂ. 51,96,401 ಮೌಲ್ಯದ ಸ್ತಿರಾಸ್ಥಿ ಸೇರಿದಂತೆ ಒಟ್ಟು ರೂ. 2,94,70,510 ಮೌಲ್ಯದ ಸ್ತಿರಾಸ್ಥಿ ಹೊಂದಿದ್ದಾರೆ.
ಸಾಲದ ಬಗ್ಗೆ ನೋಡುವುದಾದರೆ ಕೋಟ ಶ್ರೀನಿವಾಸ್ ಪೂಜಾರಿ ಅವರು ರೂ. 40,64, 924 ಸಾಲ, ಶಾಂತ ಅವರು ರೂ. 35,43,757 ಹಾಗೂ ಮಗ ಹೆಸರಿನಲ್ಲಿ ರೂ. 28,35,964 ಸಾಲ ಸೇರಿದಂತೆ ಒಟ್ಟು ಒಟ್ಟು ಸಾಲ 1,04,44,645 ಸಾಲವಿದೆ.