ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು ಸಾಧನೆ
– ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ಮತ್ತು 8ನೇ ರ್ಯಾಂಕ್ ಪಡೆದು ಶೇ.100 ಫಲಿತಾಂಶ
– ವಿಜ್ಞಾನ ವಿಭಾಗದಲ್ಲಿ ಗಣೇಶ್ 600ಕ್ಕೆ 580 ಅಂಕ ಸಾಧನೆ
– ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಮತ್ತೊಮ್ಮೆ ಮೇಲುಗೈ
NAMMUR EXPRESS NEWS
ತೀರ್ಥಹಳ್ಳಿ: 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ವಾಣಿಜ್ಯ ಹಾಗೂ ವಿಜ್ಞಾನ ಎರಡೂ ವಿಭಾಗದಲ್ಲಿ ಶೇಕಡಾ 100% ಫಲಿತಾಂಶ ಪಡೆದಿರುತ್ತದೆ.
32 ವಿದ್ಯಾರ್ಥಿಗಳು ಅತ್ಯುನ್ನತ-ದರ್ಜೆ!
ತೀರ್ಥಹಳ್ಳಿ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಲ್ಲಿ ಪರೀಕ್ಷೆ ಬರೆದ 76 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ-ದರ್ಜೆ ಹಾಗೂ 44 ವಿದ್ಯಾರ್ಥಿಗಳು ಪ್ರಥಮ ದರ್ಜೆಯನ್ನು ಪಡೆಯುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶವನ್ನು ಪಡೆದಿದೆ.
ಪ್ರೀತು ಹೆಚ್.ಎಮ್, ಸಾನಿಯಾ ಎಸ್, ಗಣೇಶ್ ಸಾಧನೆ
ವಾಣಿಜ್ಯ ವಿಭಾಗದ ಪ್ರೀತು ಹೆಚ್.ಎಮ್ 600ಕ್ಕೆ 593 ಮತ್ತು ಸಾನಿಯಾ ಎಸ್. 600ಕ್ಕೆ 589 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ರಾಜ್ಯಕ್ಕೆ 4ನೇ ಮತ್ತು 8ನೇ ರ್ಯಾಂಕ್ ಅನ್ನು ಗಳಿಸಿ ಶಿಕ್ಷಣ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಗಣೇಶ್ 600ಕ್ಕೆ 580 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿರುತ್ತಾರೆ. ಈ ಮೂಲಕ ಶಿವಮೊಗ್ಗ ಜಿಲ್ಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿರುವ ಈ ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭಹಾರೈಸಿರುತ್ತಾರೆ.