ತೀರ್ಥಹಳ್ಳಿ ತಾಲೂಕಿನ ಯಾವ ಕಾಲೇಜು ಎಷ್ಟು ಫಲಿತಾಂಶ?
– ಸಹ್ಯಾದ್ರಿ, ವಾಗ್ದೇವಿ, ಬಸವಾನಿ ಪದವಿ ಪೂರ್ವ ಕಾಲೇಜು ಶೇ.100ರ ಫಲಿತಾಂಶ
– ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು ಅಮೋಘ ಸಾಧನೆ
– ಪಿಯುಸಿ ಫಲಿತಾಂಶ ಉತ್ತಮ ಸಾಧನೆ: ಶಾಸಕ ಆರಗ ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ತೀರ್ಥಹಳ್ಳಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿಯಲ್ಲಿ ಶೇ. 92.25% ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಟಾನ ಪಡೆದಿದೆ.
ತೀರ್ಥಹಳ್ಳಿ ತಾಲೂಕು ಕಾಲೇಜು ಹಾಗೂ ಶೇ. ಪಟ್ಟಿ ಇಲ್ಲಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕಾಲೇಜಿನ ಹೆಸರು, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ , ಪಾಸಾದ ವಿದ್ಯಾರ್ಥಿಗಳು , ಶೇಕಡವಾರು ಫಲಿತಾಂಶ
1. ಸ. ಪ. ಪೂರ್ವ ಕಾಲೇಜು ಬಸವಾನಿ – 15 – 15 – 100%
2.ತುಂಗಾ ಪ .ಪೂರ್ವ ಕಾಲೇಜು,ತೀರ್ಥಹಳ್ಳಿ – 26 – 20 -76.92%
3. NES ಕೋಣಂದೂರು – 102 – 92 – 90.19%
4. NRS ಕೋಣಂದೂರು – 77 – 74 – 96.10%
5. ಮಾಳೂರು ಸ. ಪ. ಪೂ ಕಾಲೇಜು – 65 – 56 -86.15%
6. ಸ. ಪ. ಪೂ ಕಾಲೇಜು ತೀರ್ಥಹಳ್ಳಿ ( girls college ) – 107 – 100 – 93.45%
7. ಮೇಗರವಳ್ಳಿ ಸ.ಪ . ಪೂರ್ವ ಕಾಲೇಜು – 22 -19- 86.36%
8. ಸಹ್ಯಾದ್ರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ 76- 76- 100%
9. ವಾಗ್ದೇವಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ -156-156 -100%
10. KSP ಪದವಿ ಪೂರ್ವ ಕಾಲೇಜು ಕೋಣಂದೂರು -09-08- 88.88%
11. ಸ. ಪ. ಪೂ. ಕಾಲೇಜು ಆರಗ – 22 – 19 – 86.36%
12. ಸ. ಪ. ಪೂ. ಕಾಲೇಜು ತೀರ್ಥಹಳ್ಳಿ – 407 – 365 – 89.68%
ಪಿಯುಸಿ ಫಲಿತಾಂಶ ಉತ್ತಮ ಸಾಧನೆ: ಶಾಸಕ ಆರಗ ಅಭಿನಂದನೆ
ತೀರ್ಥಹಳ್ಳಿ ಕ್ಷೇತ್ರದ ಎಲ್ಲಾ ಪಿಯುಸಿ ಕಾಲೇಜುಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದು ತೀರ್ಥಹಳ್ಳಿ ಕ್ಷೇತ್ರ ಈ ಶೈಕ್ಷಣಿಕ ವರ್ಷದಲ್ಲಿ ಗಣನೀಯ ಸಾಧನೆ ಮಾಡಲು ಕಾರಣರಾದ ಎಲ್ಲಾ ವಿಧ್ಯಾರ್ಥಿಗಳು ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದಕ್ಕೆ ಶಾಸಕರಾದ ಆರಗ ಜ್ಞಾನೇಂದ್ರರವರು ಮನದಾಳದಿಂದ ಅಭಿನಂದನೆ ಸಲ್ಲಿಸಿದ್ದಾರೆ,ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಸಾಧನೆ ಉಳಿದೆಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಾರಿದೀಪವಾಗಲಿ ಎಂದಿರುವ ಶಾಸಕರು ಮುಂದಿನ ಶೈಕ್ಷಣಿಕ ವರ್ಷಗಳಲ್ಲೂ ಈ ಸಾದನೆ ಮುಂದುವರಿಯುವಂತಾಗಲಿ ಎಂದು ಹಾರೈಸಿದ್ದಾರೆ.