- ಮಂಗಳೂರಲ್ಲೊಂದು ವಿಭಿನ್ನ ಮಾನವೀಯ ಸೇವೆ
ಮಂಗಳೂರು: ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಸಹಾಯ ನೀಡುವ ಸಲುವಾಗಿ ಇಬ್ಬರು ಮಕ್ಕಳು ಸೇರಿದಂತೆ 27 ಮಂದಿ ಕೂದಲು ದಾನ ಮಾಡುವ ಮೂಲಕ ಸೇವೆಯ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಮಂಗಳೂರಿನ ಲೇಡಿಸ್ ಸರ್ಕಲ್ 82, ಮೇರಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸೆಲೂನ್ ಬಂಟ್ಸ್ ಹಾಸ್ಟೆಲ್ ಆಯೋಜಿಸಿದ “ಹೇರ್ ಫಾರ್ ಹೋಪ್” ಕೇಶ ದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು, ಮಕ್ಕಳು, ಯುವತಿಯರು ತಮ್ಮ ಅಂದದ ಕೂದಲನ್ನು ಕ್ಯಾನ್ಸರ್ ಪೀಡಿತರ ನಿಧಿಗಾಗಿ ದಾನ ಮಾಡಿದರು. ಒಂದು ವಾರದಿಂದ ಕೇಶ ದಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾನವೀಯ ನೆಲೆಯಲ್ಲಿ 27 ಮಂದಿ ಮಹಿಳೆಯರು ಕೇಶ ನೀಡಿದರು. ಈ ಪೈಕಿ ಎಂಟು ವರ್ಷದ ಮಗು ಹಾಗೂ ಒಂಬತ್ತು ವರ್ಷದ ಮತ್ತೊಬ್ಬ ಮಗು ಕೂದಲನ್ನು ನೀಡಿ ಸೈ ಎನಿಸಿಕೊಂಡರು.