ಉಡುಪಿ ಸಂತೆಕಟ್ಟೆ ಹೈವೇ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತ
– ಇಂದಿನಿಂದ ಪ್ರಯಾಣಿಕರ. ಸೇವೆಗೆ ಅಂಡರ್ ಪಾಸ್
– ಟ್ರಾಫಿಕ್ ಜಾಮ್ ಕಿರಿ ಕಿರಿ ಇನ್ನು ಇಲ್ಲ!?
NAMMUR EXPRESS NEWS
ಉಡುಪಿ: ರಾಷ್ಟೀಯ ಹೆದ್ದಾರಿ 66 ಉಡುಪಿ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯ ಒಂದು ಭಾಗ ಪೂರ್ಣಗೊಂಡಿದ್ದು, ಏ.17ರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಸಂತೆಕಟ್ಟೆಯಲ್ಲಿ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿತ್ತು. ಈ ನಡುವೆ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸರ್ವಿಸ್ ರಸ್ತೆ, ಕಳೆದ ವರ್ಷ ಜುಲೈನಲ್ಲಿ ಕುಸಿದಿತ್ತು. ಮುಂದಿನ ದಿನಗಳಲ್ಲಿ ಈ ಪರಿಸರದ ರಾಷ್ಟ್ರೀಯ ಹೆದ್ದಾರಿಯೇ ಕಡಿತಗೊಂಡರೆ ಇದಕ್ಕೆ ಸಂಸದೆ ಶೋಭಾ ಅವರೇ ನೇರ ಹೊಣೆಯಾಗುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಆದ್ಯತೆ ಮೇರೆಗೆ ಕಾಮಗಾರಿ ಚುರುಕು ಪಡೆದುಕೊಂಡಿತ್ತು.
“ಈ ಹಿಂದಿನ ರಾಷ್ಟೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಸಂತೆಕಟ್ಟೆಯಲ್ಲಿ ನಿತ್ಯ ವಾಹನ ದಟ್ಟಣೆಯಿಂದ ನಿತ್ಯ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆಯವರು ಆದ್ಯತೆಯ ಮೇರೆಗೆ ಅಂಡರ್ ಪಾಸ್ ಕಾಮಗಾರಿ ಮಂಜೂರು ಮಾಡಿ ಇದೀಗ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅಂಡರ್ ಪಾಸ್ ರಸ್ತೆಯಿಂದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಸಮಸ್ಯೆ ಪರಿಹಾರವಾಗಲಿದ್ದು, ಶೀಘ್ರದಲ್ಲೇ ಇನ್ನೊಂದು ಭಾಗದ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.