ಏ.18ರಂದು ರಾಘವೇಂದ್ರ ನಾಮಪತ್ರಕ್ಕೆ ಸಜ್ಜು
– ಯಾರ ಟೀಕೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ
– ಲಕ್ಷಾಂತರ ಮತದ ಅಂತರದಲ್ಲಿ ನಾನು ಗೆಲ್ಲುತ್ತೇನೆ
– ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಸೇರಿ ಅನೇಕ ನಾಯಕರು ಹಾಜರ್
NAMMUR EXPRESS NEWS
ಶಿವಮೊಗ್ಗ : ಏ.18ರಂದು ಗುರುವಾರ ಬೆಳಿಗ್ಗೆ 11ಕ್ಕೆ ರಾಘವೇಂದ್ರ ನಾಮಪತ್ರಕ್ಕೆ ಸಿದ್ಧತೆ ಶುರುವಾಗಿದೆ. ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಶಿವಮೊಗ್ಗ ಕ್ಷೇತ್ರ ಕೊನೆ ಘಟ್ಟಕ್ಕೆ ಬಂದಿದೆ. ರಾಘವೇಂದ್ರ ನಾಮಪತ್ರಕ್ಕೆ ಈಗಾಗಲೇ ಸಾವಿರಾರು ಮಂದಿ ಆಗಮಿಸಲು ಸಿದ್ಧತೆ ನಡೆದಿದೆ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಸೇರಿ ಬಹುತೇಕ ಗಣ್ಯರು, ಶಾಸಕರು, ಗಣ್ಯರು ಹಾಜರಿರಲಿದ್ದಾರೆ.
ನನ್ನನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ
ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ನಿಜವಾದ ಹೋರಾಟ ಪ್ರಾರಂಭವಾಗಲಿದೆ. ನಮ್ಮ ಭರವಸೆಯನ್ನು ಜಾರಿಗೆ ತಂದು ಅಭಿವೃದ್ಧಿ ಮಾಡಿದ್ದೇವೆ ಆದ್ದರಿಂದ ಮತದಾರರು ನನ್ನನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಅನೇಕರು ಅನೇಕ ರೀತಿ ಟೀಕೆಗಳನ್ನು ಮಾಡುತ್ತ ಇರುತ್ತಾರೆ. ಅದಕ್ಕೆ ಉತ್ತರ ಕೊಡಲು ಸಮಯವಿಲ್ಲ. ನನ್ನ ಬಗ್ಗೆ ಭಯ ಎಂದು ಈಶ್ವರಪ್ಪನವರು ಹೇಳಿದ್ದಾರೆ. ಹಿರಿಯ ಬಗ್ಗೆ ಯಾವಾಗಲು ಭಯ ಭಕ್ತಿ ಇರಬೇಕು ಎಂಬುವುದನ್ನು ನಮಗೆ ಹೇಳಿ ಕೊಟ್ಟಿದ್ದಾರೆ. ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರುತ್ತಾರೆ. ನಮಗೆ ಬುತ್ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯಕರ್ತರುಗಳೇ ಸ್ಟಾರ್ ಕ್ಯಾಂಪಿನಿಯರ್ ಎಂದರು.
ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ನನ್ನ ಪರವಾಗಿ ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ರಾಘಣ್ಣ ಮತ್ತು ಗೆಲ್ಲಬೇಕು ಎಂದು ಸ್ವಯಂಪ್ರೇರಿತರಾಗಿ ನನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂಬ ಭರವಸೆ ವ್ಯಕ್ತಪಡಿಸಿದರು.