ರಾಜ್ಯದಲ್ಲಿ ಸಿಇಟಿ, ಕೆಪಿಎಸ್ಸಿ ಪರೀಕ್ಷೆ ಅವಾಂತರ!
– ಒಂದೆಡೆ ಚುನಾವಣೆ, ಇನ್ನೊಂದೆಡೆ ಕೆಪಿಎಸ್ಸಿ ಪರೀಕ್ಷೆ: ಗೊಂದಲದಲ್ಲಿ ಅಭ್ಯರ್ಥಿಗಳು!
– ಅರ್ಜಿ ಸಲ್ಲಿಸಲು ಕನಿಷ್ಠ 15 ದಿನಗಳ ಅವಕಾಶ ನೀಡುವಂತೆ ಪಟ್ಟು
– ಸಿಇಟಿ ಪ್ರಾಧಿಕಾರದ ಎಡವಟ್ಟು: ಪಠ್ಯಕ್ರಮದಲ್ಲಿರದ ಪ್ರಶ್ನೆ ಕೇಳಿದ ಆರೋಪ
NAMMUR EXPRESS NEWS
ಬೆಂಗಳೂರು: ಒಂದೆಡೆ ರಾಜ್ಯದಲ್ಲಿ 18ನೇ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಚುನಾವಣೆ ಜೊತೆಗೆ ರಾಜ್ಯದಲ್ಲಿ ಕೆಪಿಎಸ್ಸಿಯಿಂದ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದ್ದು ಪರೀಕ್ಷೆಯನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಕೆಎಎಸ್, ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಏಪ್ರಿಲ್ 19 ಮತ್ತು ಮೇ 7ರಂದು 2 ಹಂತದ ಚುನಾವಣೆ ಪ್ರಕ್ರಿಯೆಯಲ್ಲಿದ್ದು ಸಾಕಷ್ಟು ಅಭ್ಯರ್ಥಿಗಳಿಗೆ ಅಧಿಸೂಚನೆ ಹೊರಡಿಸಿದ್ದು ಗಮನಕ್ಕೆ ಬಂದಿಲ್ಲ. ಅದೂ ಅಲ್ಲದೆ ಗೆಜೆಟೆಡ್ ( ಕೆಎಎಸ್) ಹುದ್ದೆಗಳಿಗೆ ಸುಮಾರು 3 ವರ್ಷದ ಬಳಿಕ ಅಧಿಸೂಚನೆ ಹೊರಡಿಸಿದೆ. ಆದರೆ ಕಳೆದ ಕೆಲವು ದಿನಗಳಿಂದ ಅಭ್ಯರ್ಥಿಗಳು ಸರ್ವರ್ ಸಮಸ್ಯೆ ಎದಿರಿಸುತ್ತಿದ್ದು ಹಲವು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಇನ್ನೂ ಕೂಡ ಲಕ್ಷಾಂತರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎದುರು ನೋಡುತ್ತಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಕನಿಷ್ಠ 15 ದಿನಗಳ ಕಾಲ ಗೆಜೆಟೆಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಬೇಕೆಂಬುವುದು ಅಭ್ಯರ್ಥಿಗಳ ಮನವಿ ಮಾಡಿದ್ದಾರೆ.
ಸಿಇಟಿ ಪ್ರಾಧಿಕಾರದ ಎಡವಟ್ಟು..!
ರಾಜ್ಯಾದ್ಯಂತ ಗುರುವಾರ ನಡೆದ ಸಿಇಟಿ ಜೀವಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿರದ 10 ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪ ನಿರಾಕರಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೀ ಉತ್ತರ ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಿ ಎಂದು ತಿಳಿಸಿದೆ. ರಾಜ್ಯಾದ್ಯಂತ ಗುರುವಾರ ಆರಂಭವಾದ 2023-24 ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಮೊದಲನೇ ದಿನ ಜೀವಶಾಸ್ತ್ರ ವಿಷಯ ಪರೀಕ್ಷೆ ನಡೆದಿದೆ. ಆದರೆ, ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲೆಬಸ್ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಕೆಇಎ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಜೀವಶಾಸ್ತ್ರದ 60 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ 10 ಪ್ರಶ್ನೆಗಳನ್ನು ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆ ಕೇಳಲಾಗಿದೆ ಎಂದು ಹೇಳಿದ್ದರು. ಔಟ್ ಆಫ್ ಸಿಲಬಸ್ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ವಿದ್ಯಾರ್ಥಿಗಳ ಪರದಾಡಿದ್ದು, ಕೆಇಎ ಈ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ ಕೊಡಬೇಕು ಎಂದು ಪೋಷಕರು ಮನವಿ ಮಾಡಿದ್ದರು. ಜೊತೆಗೆ, ಕೆಇಎ ಕಚೇರಿ ಬಳಿಗೆ ತೆರಳಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನೂ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ರಮ್ಯಾ ಅವರು, ನಾವು ಕೇಳಿದ ಎಲ್ಲ ಪ್ರಶ್ನೆಗಳು ಕೂಡ ಪಠ್ಯಕ್ರಮ ಪರಧಿಯಲ್ಲಿರುವ ಪ್ರಶ್ನೆಗಳೇ ಆಗಿವೆ. ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಸಮಿತಿ ನೀಡಿದ ಪ್ರಶ್ನೆಗಳನ್ನೇ ನಾವು ಪರೀಕ್ಷೆಗೆ ನೀಡಿರೋದು. ಪ್ರಶ್ನೆ ಪತ್ರಿಕೆಯಲ್ಲಿನ ಪ್ರತಿ ಪ್ರಶ್ನೆಯನ್ನು ಕೂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ ಮಾಡುವ ಅಧಿಕಾರ ಹೊಂದಿದ್ದಾರೆ. ಇದಕ್ಕಾಗಿಯೇ ಕಿ ಉತ್ತರ ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದರು. ಆರೋಪ ಮಾಡುವವರು ತಮ್ಮ ಬಳಿ ದಾಖಲೆಗಳು ಇದ್ದರೆ ಅವುಗನ್ನು ತಂದು ತೋರಿಸಿ. ಇಲ್ಲವೇ ದಾಖಲೆ ಸಹಿತ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದರೆ ಅದನ್ನು ಪರಿಶೀಲನೆ ಮಾಡಲಾಗುವುದು ಎಂದು ಕೆಇಎ ಕಾರ್ಯ ನಿರ್ವಾಹಕ ಅಧಿಕಾರಿ ರಮ್ಯಾ ತಿಳಿಸಿದರು.