ತೀರ್ಥಹಳ್ಳಿ ತಾಲೂಕಲ್ಲಿ ಶಿವಣ್ಣ ಸಂಚಲನ!
– ಹಲವೆಡೆ ಗೀತಾ ಶಿವರಾಜ್ ಕುಮಾರ್ ಮತ ಪ್ರಚಾರ
– ಭರ್ಜರಿ ಮತ ಪ್ರಚಾರಕ್ಕೆ ಕಾಂಗ್ರೆಸ್ ದಿಗ್ಗಜರ ಸಾಥ್
– ಎಲ್ಲೆಡೆ ಸಾವಿರಾರು ಜನ: ಶಿವಣ್ಣ ಹಾಡಿಗೆ ಫಿದಾ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಶುಕ್ರವಾರ ತೀರ್ಥಹಳ್ಳಿಯಲ್ಲಿ ಭರ್ಜರಿ ಪ್ರಚಾರ ನಡೆಯಿತು. ಪ್ರತಿ ಸಭೆಯಲ್ಲೂ ಭಾರೀ ಜನ ಕಂಡು ಬಂದಿತು. ನಟ ಶಿವರಾಜ್ ಕುಮಾರ್ ಕೂಡ ಆಗಮಿಸಿ ಎಲ್ಲರ ಗಮನ ಸೆಳೆದರು. ತೀರ್ಥಹಳ್ಳಿ ನಾಯಕರಾದ ಕಿಮ್ಮನೆ ರತ್ನಾಕರ್, ಡಾ. ಮಂಜುನಾಥ್ ಗೌಡ ಸೇರಿ ಅನೇಕ ನಾಯಕರು ಹಾಜರಿದ್ದರು.
ಎಲ್ಲೆಲ್ಲಿ ಪ್ರಚಾರ?
ಕುಡುಮಲ್ಲಿಗೆ ಗ್ರಾಮ.ಪಂನ ಕುಡುಮಲ್ಲಿಗೆ ಅತಿಥಿ ಹೋಟೆಲ್ ಎದುರು ಭಾಗ, ಹೊದಲ ಅರಳಾಪುರ ಗ್ರಾಮ.ಪಂ ವೀರಪ್ಪ ಗೌಡ ಸರ್ಕಲ್, ಹೆಗ್ಗೋಡು,ಅರೇಹಳ್ಳಿ, ತೀರ್ಥಮುತ್ತೂರು.ಗ್ರಾಮ.ಪಂ ವ್ಯಾಪ್ತಿಯಲ್ಲಿ ರಾಮಕೃಷ್ಣಪು, ಹೊನ್ನೇತಾಳು, ಆಗುಂಬೆ. ಬಿದರಗೋಡು,ಗ್ರಾಮ.ಪಂ ವ್ಯಾಪ್ತಿಯ ಬೀದರಗೋಡು, ನಾಲೂರು-ಗ್ರಾ.ಪಂ ವ್ಯಾಪ್ತಿಯ ಗಾರ್ಡರಗದ್ದೆ, ಮೇಗರವಳ್ಳಿ ಗ್ರಾಮ.ಪಂ ವ್ಯಾಪ್ತಿಯ ಮೇಗರವಳ್ಳಿಯಲ್ಲಿ ಸಭೆ ನಡೆಯಿತು.
ಮೇಗರವಳ್ಳಿಯಲ್ಲಿ ನಾಯಕರ ಪ್ರಚಾರ
ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಬಿಜೆಪಿ ಸರ್ಕಾರ, ಆರಗ ಜ್ಞಾನೇಂದ್ರ, ಅಡಿಕೆ ಬೆಳೆಗಾರರ ಪರ ಮಾತನಾಡಿಲ್ಲ. ಬಗರ್ ಹುಕುಂ ಸಮಸ್ಯೆ ಬಗೆಹರಿದಿಲ್ಲ. ಕಾಂಗ್ರೆಸ್ ಸರ್ಕಾರ ಜನರ ಸರ್ಕಾರ. ಈಗಾಗಲೇ ಎಲ್ಲಾ ಗ್ಯಾರಂಟಿ ನೀಡಿದ್ದಾರೆ ಎಂದರು. ಕಾಂಗ್ರೆಸ್ ಜಾತಿ ಧರ್ಮದ ಮೇಲೆ ಚುನಾವಣೆ ಶಿವಣ್ಣ ಕಾಂಗ್ರೆಸ್ ಪಕ್ಷದವಾರಲ್ಲ. ಆದ್ರೆ ಪತ್ನಿ, ಕಾಂಗ್ರೆಸ್ ಪರ ವಿಚಾರಕ್ಕೆ ದನಿ ಆಗಿದ್ದಾರೆ. ಬಂಗಾರಪ್ಪ ಕೊಡುಗೆ ಅಪಾರ. ಗ್ಯಾರಂಟಿ ಯೋಜನೆ ಗೆ 420 ಅನ್ನುವವರು ಏನು ಮಾಡಿದ್ದೀರಿ. ಎಲೆ ಚುಕ್ಕಿ ರೋಗಕ್ಕೆ ಮಂತ್ರ ಮಾಡಿದ್ದೀರಿ. ಇನ್ನು ಜನ ಮೂರ್ಖರಲ್ಲ. ಗೀತಾ ಅವರು ಬಹುಮತದಿಂದ ಗೆಲ್ಲುತ್ತಾರೆ ಎಂದರು.
ಕಿಮ್ಮನೆ ರತ್ನಾಕರ್ ಮಾತನಾಡಿ, ದೇಶದಲ್ಲಿ ಸಂವಿಧಾನವನ್ನು ಕೊಲೆ ಮಾಡುವ ಚುನಾವಣೆಯನ್ನು ಬಿಜೆಪಿ ಮಾಡುತ್ತಿದೆ. ಈಗ ಬಿಜೆಪಿ ಗೆದ್ದರೆ ಯಾವುದೇ ಭಾಷೆ ಅಗತ್ಯ ಇಲ್ಲ. ಮೋದಿ ಮಹಾನ್ ಸುಳ್ಳುಗಾರ. ಆರ್ ಎಸ್ ಎಸ್ ವಿರುದ್ಧ ನಿಲ್ಲಲು ಮೋದಿ ಸಿದ್ಧರಿದ್ದಾರಾ? ರೈತರು, ಕಾರ್ಮಿಕರಿಗೆ ಅನುಕೂಲ ಮಾಡಿಲ್ಲ. ನಮ್ಮ ಜನ ಮೋದಿ ಡ್ರೆಸ್ ನೋಡಿ ಮಾತನಾಡುತ್ತಾರಾ? ಧರ್ಮ ಘರ್ಷಣೆ ಮಾಡಿ ಗೆಲ್ಲುತ್ತಿದ್ದಾರೆ. ಬಡವರು, ಶ್ರೀಮಂತರ ನಡುವಿನ ಯುದ್ಧ. ಬಿಜೆಪಿ ಶ್ರೀಮಂತರ ಪಕ್ಷ ಎಂದರು.
ಶಿವರಾಜ್ ಕುಮಾರ್ ಮಾತು, ಹಾಡಿಗೆ ಫಿಧಾ
ನಟ ಶಿವರಾಜ್ ಕುಮಾರ್ ಮಾತನಾಡಿ, ರಾಜಕೀಯ ಜಾಸ್ತಿ ಮಾತಾಡಲ್ಲ. ಗೀತಾಗೋಸ್ಕರ ಬಂದಿದ್ದೇನೆ. ಬೆಂಬಲ ಕೊಡಬೇಕು. ಸ್ನೇಹಿತೆಯಾಗಿ ನಾನು ಬಂದಿದ್ದೇನೆ. ಮಾತು ಕೆಲಸ ಆಗಬಾರದು. ಕೆಲಸ ಮಾತಾಡಬೇಕು. ಮಹಿಳೆ ಏನನ್ನೂ ಸಾಧಿಸಬಹುದು. ಒಂದು ಬಾರಿ ಅವಕಾಶ ಕೊಟ್ಟರೆ ಅವರು ಜನಪರವಾಗಿ ಕೆಲಸ ಮಾಡುತ್ತಾರೆ ಎಂದರು.
ತಂದೆಯಂತೆ ಸೇವೆ ಮಾಡುತ್ತೇನೆ: ಗೀತಾ
ಬಂಗಾರಪ್ಪ ಹಾಗೂ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಪರವಾಗಿದೆ. ನಮ್ಮ ತಂದೆಯವರ ಸೇವೆ ನಾನು ಮುಂದುವರಿಸುತ್ತೇನೆ. ತಂದೆಯಂತೆ ಸೇವೆಯನ್ನು ನಾನು ಕೂಡ ಮಾಡಬೇಕು. ಕಾಂಗ್ರೆಸ್ ಕೂಡ ಬಡವರ ಕಷ್ಟ ಗೊತ್ತಿರುವ ಪಕ್ಷ. ಹಾಗಾಗಿ ಆ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಸೇವೆಗೆ ನನ್ನಗೆ ಒಂದು ಅವಕಾಶ ಕೊಡಿ. ಗ್ರಾಮೀಣ ಮಕ್ಕಳ ವಿದ್ಯೆಗೆ ಸೇವೆ ಸಲ್ಲಿಸುತ್ತೇನೆ.ಶಿವಮೊಗ್ಗದಲ್ಲಿ ನಾವು ಅನಾಥಶ್ರಮ ತೆರೆಯಲು ಪ್ಲಾನ್ ಮಾಡಿದ್ದೇವೆ. ನನ್ನನ್ನು ಗೆಲ್ಲಿಸಿ ನಿಮ್ಮ ದನಿಯಾಗಿರುತ್ತೇನೆ. ರೈತರ ಪರವಾಗಿ ಇರುತ್ತೇನೆ ಎಂದರು.
ಹಳ್ಳಿ ಹಳ್ಳಿಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ
ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಾದ ಮೂಡುಬ ರಾಘವೇಂದ್ರ, ಪುಟ್ಟೋಡ್ಲು ರಾಘವೇಂದ್ರ, ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ಬಂಡೆ ವೆಂಕಟೇಶ್, ಹಾರೋಗೋಳಿಗೆ ಪದ್ಮನಾಭ, ಸುಂದರೇಶ್, ಶಿವು ಹೊದಲ, ಪಟೇಲ್ ವೆಂಕಟೇಶ್ ಹೆಗ್ಡೆ, ನಿತಿನ್ ಹೆಗ್ಡೆ, ಸಂದೀಪ್ ಗಾರ್ಡರಗದ್ದೆ, ಪೂರ್ಣೇಶ್ ಕೊಡಿಗೆಬೈಲು, ಅಸಾದಿ ಸೇರಿ ಎಲ್ಲಾ ಹೋಬಳಿ, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಯೂಥ್ ಕಾಂಗ್ರೆಸ್, ಕಾಂಗ್ರೆಸ್ ಕಿಸಾನ್ ಸೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ಗ್ರಾಂ ಪಂ ಅಧ್ಯಕ್ಷರು ಸದಸ್ಯರು ಸ್ಥಳೀಯರು ಗ್ರಾಮಸ್ಥರು ಇದ್ದರು.