ಶಿವಮೊಗ್ಗ ಲೋಕ ಸಭಾ ಕ್ಷೇತ್ರ: 23 ಮಂದಿ ಅಂತಿಮ!
– ರಾಘವೇಂದ್ರ, ಗೀತಾ ಶಿವಕುಮಾರ್, ಈಶ್ವರಪ್ಪ ಕಣದಲ್ಲಿ
– ಈಶ್ವರಪ್ಪ ಅವರಿಗೆ ಕಬ್ಬು ಮತ್ತು ರೈತ ಚಿನ್ಹೆ
NAMMUR EXPRESS NEWS
ಶಿವಮೊಗ್ಗ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.22 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಅಂತಿಮವಾಗಿ 23 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಮೂಲಕ ಶಿವಮೊಗ್ಗ ಕಣ ಭಾರೀ ಕುತೂಹಲ ಪಡೆದಿದೆ.
ಯಾರು ಯಾರು ಕಣದಲ್ಲಿ ಉಳಿದಿದ್ದಾರೆ?
ಬಿಜೆಪಿ ಪಕ್ಷದಿಂದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ಕುಮಾರ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ.ಪ್ರಭು, ಉತ್ತಮ ಪ್ರಜಾಕೀಯ ಪಕ್ಷದಿಂದ ಅರುಣ್ ಕೆ.ಎ, ಬಹುಜನ ಸಮಾಜ ಪಾರ್ಟಿಯಿಂದ ಎ.ಡಿ.ಶಿವಪ್ಪ, ಯಂಗ್ಸ್ಟರ್ ಎಂಪರೆಂಟ್ ಪಾರ್ಟಿಯಿಂದ ಯೂಸುಫ್ ಖಾನ್, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ರವಿಕುಮಾರ್ ಎಸ್, ಶಿವರುದ್ರಯ್ಯ ಸ್ವಾಮಿ, ಹೆಚ್ ಸುರೇಶ್ ಪೂಜಾರಿ, ಚಂದ್ರಶೇಖರ್ ಹೆಚ್.ಸಿ, ಜಾನ್ ಬೆನ್ನಿ, ಪಿ.ಶ್ರೀಪತಿ, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಂತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ಬಂಡಿ ರಂಗನಾಥ ವೈ.ಆರ್, ಹನುಮಂತಪ್ಪ, ಜಿ.ಜಯದೇವ, ಎನ್.ವಿ.ನವೀನ್ ಕುಮಾರ್, ಗಣೇಶ್.ಬಿ, ಕುಣಜೆ ಮಂಜುನಾಥ ಗೌಡ ಅಂತಿಮವಾಗಿ ಕಣದಲ್ಲಿದ್ದಾರೆ. ರಾಜ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಚುನಾವಣೆ ಆಯೋಗ ಚಿಹ್ನೆ ಬಿಡುಗಡೆ ಮಾಡಿದ್ದು ಕಬ್ಬು ಮತ್ತು ರೈತ ಇರುವ ಚಿಹ್ನೆ ದೊರೆತಿದ್ದು ಅವರ ಕ್ರಮ ಸಂಖ್ಯೆ 8 ಎಂದು ಸ್ಪಷ್ಟಪಡಿಸಲಾಗಿದೆ.