ಪುಸ್ತಕ ಮನೆಯಲ್ಲಿ ಪುಸ್ತಕ ಸಂತೆ!
– ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ ಕಾರ್ಕಳದ ಪುಸ್ತಕ ಮನೆಯಲ್ಲಿ – ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆ
– ಎಲ್ಲಾ ಪುಸ್ತಕಗಳಿಗೂ ಶೇ. 10 ರಿಂದ 50% ರಿಯಾಯಿತಿ
– ಮೂಡುಬಿದಿರೆಯಲ್ಲಿ ಶುರುವಾಗಲಿದೆ “ಪುಸ್ತಕ ಮನೆ”
NAMMUR EXPRESS NEWS
ಕಾರ್ಕಳ/ಮೂಡಬಿದರೆ: ರಾಜ್ಯದ ಪ್ರಸಿದ್ಧ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ ಪುಸ್ತಕ ಮನೆಯಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 29 ರವರೆಗೆ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ಪುಸ್ತಕ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೇ ಕನ್ನಡ ಪುಸ್ತಕ ಲೋಕದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿರುವ ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕಗಳಿಗೂ 10 ರಿಂದ 50ವರೆಗೆ ಶೇಕಡಾ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಜೊತೆಗೆ ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ.
ಪುಸ್ತಕ ಪ್ರೇಮಿಗಳು, ಲೇಖಕರು, ಓದುಗರಿಗೆ ಸುವರ್ಣ ಅವಕಾಶ
ಪುಸ್ತಕ ಪ್ರೇಮಿಗಳು, ಲೇಖಕರು, ಓದುಗರು ಹಾಗೂ ಸಮಸ್ತ ಜನತೆ ಪುಸ್ತಕ ಮನೆಗೆ ಭೇಟಿ ನೀಡಿ ತಮ್ಮ ಇಷ್ಟದ ಪುಸ್ತಕ ಕೊಳ್ಳಬಹುದು.ಅಲ್ಲದೆ ತಮ್ಮವರಿಗೆ ಪುಸ್ತಕ ಹಾಗೂ ಇತರೆ ಗಿಫ್ಟ್ ನೀಡಲು ಅನೇಕ ಪುಸ್ತಕ ಹಾಗೂ ಗಿಫ್ಟ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಮೂಡಬಿದಿರೆಯಲ್ಲಿ ಶೀಘ್ರದಲ್ಲಿ ಪುಸ್ತಕಮನೆ ಶುರು
ಕರಾವಳಿಯ ಅತೀ ದೊಡ್ಡ ಪುಸ್ತಕ ಮಳಿಗೆ ಕ್ರಿಯೇಟಿವ್ ಪುಸ್ತಕ ಮನೆ ಶೀಘ್ರದಲ್ಲಿ ಮೂಡುಬಿದಿರೆಯಲ್ಲಿ ಆರಂಭಗೊಳ್ಳಲಿದೆ.