- ಮಾಜಿ ಸಚಿವರ ಅಪಹರಣ ಪುರಾಣ
- ಪೊಲೀಸರಿಗೆ ಮಂಡೆ ಬಿಸಿ!
ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಕಿಡ್ನಾಪ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹೊಸದೊಂದು ಆಯಾಮ ಸಿಕ್ಕಿದೆ. ಪ್ರಕಾಶ್ ಅವರ ಎರಡನೇ ಹೆಂಡತಿ ಮತ್ತು ಆಕೆಯ ಮೊದಲ ಪುತ್ರ ಸೇರಿ ವರ್ತೂರು ಪ್ರಕಾಶ್ ಅವರನ್ನು ಅಪಹರಣ ಮಾಡಿಸಿರಬಹುದು ಎನ್ನುವ ಅನುಮಾನ ಮೂಡಿದೆ. ಆದರೆ ಇದು ತನಿಖೆಯಿಂದ ಹೊರ ಬರಬೇಕಿದೆ.
ತೋಟದ ಮನೆ ರಹಸ್ಯ!: 2017ರಲ್ಲಿ ವರ್ತೂರು ಪ್ರಕಾಶ್ ಅವರ ಮೊದಲ ಪತ್ನಿ ಡೆಂಗ್ಯೂನಿಂದ ತೀರಿಕೊಂಡರು. ಬಳಿಕ ತಮ್ಮ ತೋಟದ ಮನೆ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನು ಪ್ರಕಾಶ್ ಮದುವೆಯಾಗಿದ್ದರು.
ಮೊದಲೇ ಇಬ್ಬರು ಗಂಡುಮಕ್ಕಳಿದ್ದ ಕಾರಣ ಆಸ್ತಿ ವಿವಾದ ಉಂಟಾಗಿ ಫಾರ್ಮ್ ಹೌಸ್ ಬೇರೆಯವರಿಗೆ ಕೊಡುವ ನಿರ್ಧಾರಕ್ಕೆ ಬರಲಾಗಿತ್ತು. ಆ ಕಾರಣಕ್ಕಾಗಿ ಪತ್ನಿ ಹಾಗೂ ಆಕೆಯ ಮೊದಲ ಪತಿಯ ಮಗ ಸೇರಿ ಅಪಹರಣ ಮಾಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈಗಾಗಲೇ ಭಾರಿ ಸುದ್ದಿಯಲ್ಲಿರುವ ಈ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.