- ದಿನಕ್ಕೆ 2000-4000 ಸಾವು
- ರಾಜ್ಯದಲ್ಲೂ ಹೊಸ ನಿಯಮ..?
ಅಮೆರಿಕಾ: ಅಮೆರಿಕದ ಆಸ್ಪತ್ರೆಗಳಲ್ಲಿ 10 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರತಿ ದಿನ 2 ರಿಂದ ನಾಲ್ಕು ಸಾವಿರ ಮಂದಿ ಮೃತಪಡುತ್ತಿದ್ದಾರೆ. ಈ ಘಟನೆ ಇದೀಗ ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿ ಅನೇಕ ದೇಶಗಳಲ್ಲಿ ಮತ್ತೊಂದು ಸುತ್ತಿನ ಲಾಕ್ ಡೌನ್ ಶುರುವಾಗಿದೆ. ಇತ್ತ ಭಾರತದ ಅಹಮದಾಬಾದ್ ಸೇರಿ ಅನೇಕ ಕಡೆ ರಾತ್ರಿ ಕರ್ಪ್ಯೂ ಹೇರಿಕೆಯಾಗಿದೆ. ಆದರೆ ಜನತೆ ಮತ್ತೆ ಎಲ್ಲಾ ಭಯ ಬಿಟ್ಟಿದ್ದಾರೆ.
ಕರ್ನಾಟಕದಲ್ಲಿ ಕೊರೊನಾದ ಎರಡನೇ ಅಲೆ ಕಾಣಿಸಿಕೊಳ್ಳಲಿದೆ ಎನ್ನುವ ಕುರಿತು ತಜ್ಞರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ಧಾರಕ್ಕೆ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಇನ್ನು ಹೊಸ ವರ್ಷಾಚರಣೆಗೂ ಕರೋನಾ ಕರಿ ನೆರಳು ಬಿದ್ದಿದ್ದು, ಬಹುತೇಕ ಸರ್ಕಾರ ಹೆಚ್ಚಿನ ಜನ ಸೇರುವಿಕೆಗೆ ಬ್ರೇಕ್ ಹಾಕಲಿದೆ.