ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯಕ್ಕೆ ಟಾಪ್!
– ಮಂಗಳೂರಿನಲ್ಲಿ ಎರಡೂವರೆ ತಾಸು ವಿಳಂಬವಾಗಿ ಮತದಾನ ಆರಂಭ
– ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಯತ್ನ: ಓರ್ವ ಅರೆಸ್ಟ್
– ಕರಾವಳಿಯಲ್ಲಿ ಅತೀ ಹೆಚ್ಚು ಮತದಾನ
NAMMUR EXPRESS NEWS
ಮಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾರರು ಮತಗಟ್ಟೆಗಳತ್ತ ಸಾಗಿ ಬರುತ್ತಿದ್ದು, ದ.ಕ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ಮತದಾನವನ್ನು ಸುಶಿಕ್ಷಿತರ ನಾಡು ಕರಾವಳಿ ಉತ್ತಮ ಮತದಾನ ಆಗುತ್ತಿದೆ.
ಮಂಗಳೂರಿನಲ್ಲಿ ಎರಡೂವರೆ ತಾಸು ವಿಳಂಬವಾಗಿ ಮತದಾನ ಆರಂಭ
ಇಡೀ ರಾಜ್ಯದ 14 ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲೇ ಅತ್ಯಧಿಕ ಶೇಕಡಾವಾರು ಮತದಾನ ಇಲ್ಲಿವರೆಗೆ ದಾಖಲಾಗಿದೆ. ಪ್ರತಿಬಾರಿಯೂ ಅತ್ಯಧಿಕ ಪ್ರಮಾಣದಲ್ಲಿ ಮತದಾನ ದಾಖಲಿಸುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೆಲವು ಕಡೆ ಸಣ್ಣ ಪುಟ್ಟ ಗೊಂದಲ ಉಂಟಾಗಿ ಮತದಾನ ಪ್ರಕ್ರಿಯೆ ಕೂಡ ವಿಳಂಬವಾಗಿ ಆರಂಭವಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 20ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆ ಸುಮಾರು ಎರಡೂವರೆ ತಾಸು ವಿಳಂಬವಾಗಿ ಮತದಾನ ಆರಂಭವಾಗಿದೆ. ಬಿಜೈ ಚರ್ಚ್ ಆವರಣದಲ್ಲಿರುವ ಸೇಂಟ್ ಫ್ರಾನ್ಸಿಸ್ ಝೇವಿಯರ್ ಶಾಲೆಯ ಮತಗಟ್ಟೆಯಲ್ಲಿ ಮತದಾರರು ಬೆಳಗ್ಗೆ 7 ಗಂಟೆಗೂ ಮೊದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಬಳಿಕ ಮತಯಂತ್ರ ಬದಲಿಸಿ ಮತದಾನ ಆರಂಭವಾಗುವಷ್ಟರಲ್ಲಿ ಬೆಳಗ್ಗೆ 9.30 ಗಂಟೆಯಾಗಿತ್ತು. ಇದರಿಂದ ಬೆಳಗ್ಗೆ 6 ಗಂಟೆಗೆಯೇ ಮತದಾನ ಮಾಡುವುದಕ್ಕೆ ಬಂದು ಕಾದು ನಿಂತಿದ್ದ ಹಲವಾರು ಮತದಾರರಿಗೆ ಅನಾನುಕೂಲವಾಗಿದ್ದು, ಚುನಾವಣಾ ಸಿಬ್ಬಂದಿಗೆ ಹಿಡಿಶಾಪ ಹಾಕಿದ್ದಾರೆ.
ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತನ ಕಿರಿಕ್!
ದಕ್ಷಿಣ ಕನ್ನಡದ ಮಂಗಳೂರಿನ ಕಪಿತಾನಿಯೊ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಮತ ಚಲಾವಣೆ ಮಾಡಿ ಹೊರಗಡೆ ಬಂದಾಗ ಈ ಘಟನೆ ನಡೆದಿದೆ. ಪದ್ಮರಾಜ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿರಬೇಕಾದರೆ ಎಷ್ಟುಹೊತ್ತು ನೀವು ಪ್ರತಿಕ್ರಿಯೆ ನೀಡುವುದು ಎನ್ನುವುದಾಗಿ ಬಿಜೆಪಿ ಕಾರ್ಯಕರ್ತರಾದ ಸಂದೀಪ್ ಎಕ್ಕೂರು ಎಂಬವರು ಪ್ರಶ್ನಿಸಿದ್ದಾರೆ. ಆಗ ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಟಿಡಿ ನಾಗರಾಜ್ ಅವರು ಆ ವ್ಯಕ್ತಿಯನ್ನು ತಳ್ಳಿ ಆಚೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಸಿಟ್ಟಾದ ಬಿಜೆಪಿ ಕಾರ್ಯಕರ್ತರು ಮಾಧ್ಯಮದ ವಿರುದ್ಧವೂ ವಾಗ್ದಾನ ನಡೆಸಿದ್ದಾರೆ.
ಜತೆಗೆ ಪೊಲೀಸರೊಂದಿಗೂ ಮಾತಿನ ಚಕಮಕಿ ನಡೆಸಿದ್ದಾರೆ. ಆಗ ಇನ್ಸ್ಪೆಕ್ಟರ್ ಅವರು ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಎಚ್ಚರಿಕೆ ಕೊಟ್ಟ ಮೇಲೆ ಬಿಜೆಪಿ ಕಾರ್ಯಕರ್ತರು ಸುಮ್ಮನಾಗಿದ್ದು ಪರಿಸ್ಥಿತಿ ಕೂಡ ತಣ್ಣಗಾಯಿತು. ಉಡುಪಿ ಚಿಕ್ಕಮಗಳೂರು ಹಾಸನ ಮತ್ತು ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾಣಿ ಸರಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಮಾಡಿದರು.