ಜೆಇಇ ಪರೀಕ್ಷೆಯಲ್ಲಿ ನ್ಯೂ ವೈಬ್ರೆಂಟ್ ಪಿಯು ಕಾಲೇಜು ಬೆಸ್ಟ್!
– ಕಾಲೇಜಿನ ಪ್ರಾರಂಭದ ವರ್ಷದ ಜೆಇಇ ಪರೀಕ್ಷೆಯಲ್ಲಿ ಅಮೋಘ ಸಾಧನೆ
– ಜೆಇಇ ಮೇನ್ಸ್ನಲ್ಲಿ ವೈಬ್ರೆಂಟ್ ಕಾಲೇಜಿನ ಪ್ರಜ್ವಲ್ ಗೆ 100 ಪರ್ಸೆಂಟೈಲ್
– ಅಪ್ರತಿಮ ಸಾಧನೆ, ಶ್ರೇಷ್ಠ ಫಲಿತಾಂಶಕ್ಕೆ ಅಭಿನಂದನೆ
NAMMUR EXPREES NEWS
ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ರಾಷ್ಟ್ರ ಮಟ್ಟದಲ್ಲಿ ನಡೆಸಿದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾರಂಭದ ವರ್ಷದ ಜೆಇಇ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಸರ್ವಶ್ರೇಷ್ಠ ಫಲಿತಾಂಶವನ್ನು ದಾಖಲಿಸಿದೆ. ಕಳೆದೆರಡು ವರ್ಷದಿಂದ ಮೂಡುಬಿದಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜು ಪಿಯು ವಿಜ್ಞಾನ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅತ್ಯುತ್ತಮ ಪೂರಕ ತರಬೇತಿಯನ್ನು ನೀಡುತ್ತಿದೆ ಎಂಬುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ.
ಶೇ.99.59 ಸಾಧನೆ ಮೂಲಕ ಚಂದನ್ ಟಾಪರ್
ವಿದ್ಯಾರ್ಥಿ ಚಂದನ್ ಆರ್ 99.5956839 (ಭೌತಶಾಸ್ತ್ರ 99.8118277, ರಸಾಯನಶಾಸ್ತ್ರ, 99.9669427, ಗಣಿತಶಾಸ್ತ್ರ 96.4713461) ಪರ್ಸೆಂಟೈಲ್ ಪಡೆಯುವ ಮೂಲಕ ಅತಿ ಹೆಚ್ಚು ಪರ್ಸೆಂಟೈಲ್ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾನೆ.
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು
ರಾಷ್ಟ್ರ ಮಟ್ಟದಲ್ಲಿ ಮಹೇಶ್ – 361AIR, ಪ್ರಜ್ವಲ್ ಎಮ್. – 417AIR ಮತ್ತು ಸಾಗರ್ 465 AIR ರಾಂಕ್ ಗಳನ್ನು ಪಡೆದಿರುತ್ತಾರೆ. ಸಂಸ್ಥೆಯಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ, 44 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದಿರುತ್ತಾರೆ. ಹಾಗೆಯೇ ವೈಯಕ್ತಿಕ ವಿಷಯಗಳಲ್ಲಿ ಭೌತಶಾಸ್ತ್ರ 76 ವಿದ್ಯಾರ್ಥಿಗಳು, ರಸಾಯನಶಾಸ್ತ್ರ 83 ವಿದ್ಯಾರ್ಥಿಗಳು, ಗಣಿತಶಾಸ್ತ್ರ 18 ವಿದ್ಯಾರ್ಥಿಗಳು 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್ನ್ನು ಗಳಿಸಿರುತ್ತಾರೆ.
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಅಂಕ?
ಅಶ್ವಿನ್ ಉಪಾಧ್ಯ 99.5655571 (ಭೌತಶಾಸ್ತ್ರ 99,6827730, ರಸಾಯನಶಾಸ್ತ್ರ 99,7218449, ಗಣಿತಶಾಸ್ತ್ರ 98.1208253), ಮಹೇಶ್ 99.0589392 ( ಭೌತಶಾಸ್ತ್ರ 98.9838397, ರಸಾಯನಶಾಸ್ತ್ರ 99.7144367, ಗಣಿತಶಾಸ್ತ್ರ 87.4695198), ಪ್ರಜ್ವಲ್ 98.7263878 ( ಭೌತಶಾಸ್ತ್ರ 100, ರಸಾಯನಶಾಸ್ತ್ರ 99.574841, ಗಣಿತಶಾಸ್ತ್ರ 43.2366159). ಸಿಂಚನಾ ಅರಸ್ 98.3441038 ( ಭೌತಶಾಸ್ತ್ರ 98,9838397, ರಸಾಯನಶಾಸ್ತ್ರ 98,2829116. ಗಣಿತಶಾಸ್ತ್ರ 82.9895139), ಪ್ರತೀಕ್ 98,1456558 ( ಭೌತಶಾಸ್ತ್ರ, 99.6205324, ರಸಾಯನಶಾಸ್ತ್ರ 93.0134963, ಗಣಿತಶಾಸ್ತ್ರ 96.2455137), ಶ್ರೀರಕ್ಷಾ ಆರ್. ಜೆ (97.9523525), ನಿತೇಶ್ ಹರ್ಸುರ್ (96.9792134), ಪ್ರಜ್ವಲ್ ಎಂ,(96.4308223) ),ಅನಿಲ್ ಕುಮಾರ್ (96.2192753). ಬೆನಕ ಟಿ ಎಸ್ (95.9133237), ಅಭಿಷೇಕ್ ಷೇಟ್(95.8540934),ಅಶ್ವಿನ್ ಚೇತನ್ ನ್ಯಾಕ್ (95.8137175), ಆಕಾಶ್ ಮಲ್ಲಪ್ಪ ಗೌಡಪ್ಪನವರ್ (95.7860871). ಸುಜಯ್ ಪಿ. ವಿ (95.739) ರಾಹುಲ್ ಕೆ ಎಸ್ (95.6793799), ಮಲ್ಲಿಕಾರ್ಜುನ್ ಜಗದೀಶ್ ಕಂಬಾರ್ ( 95.1029825) ಐರೋಲ್ ಡೀನಾ ರೊಡ್ರಿಗಸ್ (95.0417952), ಸಿಂಚನ ವಿ. ವೈ (95,0163276), ಪರ್ಸೆಂಟೈಲ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.