ಉಡುಪಿ ಹುಡುಗ ಈಗ ಅಮೇರಿಕಾದಲ್ಲಿ ಬಾಸ್!
– ಅಮೆರಿಕದಲ್ಲಿ ಜನಿಸಿ ಸ್ಕ್ಯಾನ್ ಫರ್ಡ್ ವಿವಿಯಿಂದ ಎಂಎಸ್ ಪದವಿ ಪಡೆದಿರುವ ಕನ್ನಡಿಗ
– ಕರಾವಳಿ ಮೂಲದ ಕಾರ್ತಿಕ್ ಕಂಟೆಂಟ್ಫುಲ್ ಎಂಬ ಕಂಪೆನಿಯ ಸಿಇಒ
NAMMUR EXPRESS NEWS
ಉಡುಪಿ: ಕನ್ನಡದ ಮಣ್ಣು ಅನೇಕ ಸಾಧಕರನ್ನು ವಿಶ್ವಕ್ಕೆ ಕೊಟ್ಟಿದೆ. ಅದರಲ್ಲೂ ಕರಾವಳಿ ಪ್ರತಿಭೆಗಳ ಕಣಜ. ಇದೀಗ ಅಮೆರಿಕದ ಕಂಟೆಂಟ್ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮಗನಾಗಿರುವ ಕಾರ್ತಿಕ್, ಉನ್ನತ ಹುದ್ದೆಗೇರಿರುವುದು ನಾಡಿನ ಹೆಮ್ಮೆಯಾಗಿದೆ. ಮೈಕ್ರೋಸಾಫ್ಟ್, ಆಲ್ಬಾ ಬೆಟ್, ನೊವಾರ್ಟಿಸ್, ಎಡೋಬ್, ಐಬಿಎಂ ಸಹಿತ 30ಕ್ಕೂ ಅಧಿಕ ಜಾಗತಿಕ ಕಂಪನಿಗಳಿಗೆ ಭಾರತೀಯರು ಯಶಸ್ವಿಸಿ ಇಒಗಳಾಗಿದ್ದು, ಈಗ ಉಡುಪಿ ಮೂಲದ ಕಾರ್ತಿಕ್ ರಾವ್ ಸಾಧಕರ ಸಾಲಿಗೆ ಸೇರಿದ್ದಾರೆ. ಅಮೆರಿಕದ ಕಂಟೆಂಟ್ಫುಲ್ (ಡೆನ್ವರ್ ಆಂಡ್ ಸಾನ್ ಫ್ರಾನ್ಸಿಸ್ಕೊ ಆಂಡ್ ಬರ್ಲಿನ್) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ತಿಕ್ ಅಧಿಕಾರ ವಹಿಸಿಕೊಂಡಿದ್ದಾರೆ. 2019ರಿಂದ ಸಿಇಒ ಆಗಿದ್ದ ಸ್ಟೀವ್ ಫ್ಲೋವನ್ ಬದಲಿಗೆ ಅವರು ಕಂಪನಿಯನ್ನು ಮುನ್ನಡೆಸಲಿದ್ದಾರೆ.
ಹಲವು ಪ್ರಮುಖ ಹುದ್ದೆ ಅಲಂಕರಿಸಿದ್ದ ಕಾರ್ತಿಕ್
ಉಡುಪಿ ತಾಲೂಕು ಅಲೆವೂರು ಮೂಲದ ಅಮೆರಿಕ ನಿವಾಸಿ ದಿ. ಡಾ. ಸುಬ್ರಹ್ಮಣ್ಯ ರಾವ್ ಅವರ ಪುತ್ರ ಕಾರ್ತಿಕ್ ರಾವ್ (46) ಅಮೆರಿಕದಲ್ಲಿ ಹುಟ್ಟಿ ಎಂಎಸ್ (ಸ್ಕ್ಯಾನ್ ಫರ್ಡ್ ವಿವಿಯಿಂದ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ) ಪೂರೈಸಿದ್ದಾರೆ. 20 ವರ್ಷಗಳಿಂದ ನಾಯಕತ್ವದ ಅನುಭವದೊಂದಿಗೆ ಕಂಪನಿಯ ಸ್ಥಾಪಕ, ನಿರ್ವಹಣಾ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಾರ್ತಿಕ್ ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಕ್ಲೋಡ್ ಮಾನಿಟರಿಂಗ್ಗೆ ಸಂಬಂಧಿಸಿದ ಸಿಗ್ನಲ್ ಎಫ್ ಎಕ್ಸ್ ಕಂಪನಿಯನ್ನು ಇತ್ತೀಚೆಗೆ ಸ್ಪ್ಲಂಕ್ ಕಂಪನಿಯು 1.05 ಬಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿದೆ. ವಿಎಂವೇರ್ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜ್ಮೆಂಟ್ ಮತ್ತು ವರ್ಲ್ಡ್ ವೈಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿದ್ದ ಕಾರ್ತಿಕ್, ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಪ್ಪ, ಅಜ್ಜನೂ ಪ್ರತಿಭಾವಂತರು!
ತಂದೆ, ಉಡುಪಿ ಅಲೆವೂರಿನ ದಿವಂಗತ ಡಾ. ಎಲ್. ಸುಬ್ರಹ್ಮಣ್ಯ ರಾವ್ ಚೆನ್ನೈನ ಸ್ಪ್ಯಾನ್ಸಿ ಮೆಡಿಕಲ್ ಕಾಲೇಜಿನಿಂದ ಚಿನ್ನದ ಪದಕ ಪಡೆದಿದ್ದು, ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿದ್ದರು. ತಾಯಿ ರಜಿ ರಾವ್ ಹಿರಿಯ ಚಲನಚಿತ್ರ ನಿರ್ದೇಶಕ ಬಿ. ವಿಠಲ ಆಚಾರ್ಯರ ಪುತ್ರಿ. ಅಜ್ಜ ದಿವಂಗತ ಜಿ. ಲಕ್ಷ್ಮೀನಾರಾಯಣ್, ಇಂಡಿಯನ್ ಬ್ಯಾಂಕ್ ಚೇರ್ ಮೆನ್ ಮತ್ತು ಎಂಡಿಯಾಗಿದ್ದರು.