- ಹೋಟೆಲ್ ಮಯೂರ ಡಿಲಕ್ಸ್ ಹೋಟೆಲ್ ಜತೆ ಲಾಡ್ಜಿಂಗ್ ಶುರು
- ಮಲೆನಾಡಿನ ಗ್ರಾಹಕರ ಮೆಚ್ಚಿನ ಹೋಟೆಲ್
ತೀರ್ಥಹಳ್ಳಿ: ಮಲೆನಾಡಿನ ಸುಂದರ ತಾಣ ತೀರ್ಥಹಳ್ಳಿಯಲ್ಲಿ ಕಳೆದ 25 ವರ್ಷದಿಂದ ಸಸ್ಯಾಹಾರಿ ಹೋಟೆಲ್ ಸೇವೆ ನೀಡುತ್ತಿರುವ ಮಯೂರ ಸಂಸ್ಥೆ ಇದೀಗ ಅತ್ಯಾಧುನಿಕ ಲಾಡ್ಜಿಂಗ್ ಸೇವೆ ಶುರು ಮಾಡಿದೆ.
ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿರುವ ಮಯೂರ ಹೋಟೆಲ್ ಉನ್ನತೀಕರಣ ಮತ್ತು ಡಿಲಕ್ಸ್ ಲಾಡ್ಜಿಂಗ್ ಉದ್ಘಾಟನೆಯನ್ನು ಬೆಳಿಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ನೆರವೇರಿಸಿ ಶುಭ ಕೋರಿದರು. ನಾಯಕರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡ ಸೇರಿದಂತೆ ಬಹುತೇಕ ಗಣ್ಯರು, ಉದ್ಯಮಿಗಳು, ಗ್ರಾಹಕರು ಭಾಗಿಯಾಗಿ ಶುಭ ಕೋರಿದರು.
ಅತ್ಯಾಧುನಿಕ, ಗ್ರಾಹಕ ಸ್ನೇಹಿ ಸೌಲಭ್ಯ ನೀಡಲು ಸಂಸ್ಥೆ ಸಿದ್ಧವಾಗಿದೆ. ಎಸಿ, ಲಾಕರ್, ಡ್ರೈವರ್ ರೂಮ್ಸ್, 24/7 ಫುಡ್, ವೈಫೈ, ಲಾಂಡ್ರಿ ಸೇರಿ ಹತ್ತಾರು ಸೌಲಭ್ಯಗಳಿವೆ. ಈ ಮೂಲಕ ಮಲೆನಾಡಿನಲ್ಲೇ ಅತೀ ಹೆಚ್ಚು ಸೌಲಭ್ಯವುಳ್ಳ ಲಾಡ್ಜ್ ಇದಾಗಲಿದೆ.
ಸಂಪರ್ಕ ಸಂಖ್ಯೆ : 9448724888, 8951062099, 08181-229095, 08181-295108.
ಮಲೆನಾಡಿನ ಎಲ್ಲಾ ಸುದ್ದಿ, ಮಾಹಿತಿಯನ್ನು ರಾಜ್ಯದ ಪ್ರಮುಖ ನ್ಯೂಸ್ ವೆಬ್ಸೈಟ್ nammurexpress.in ಕ್ಲಿಕ್ ಮಾಡಿ ಪಡೆಯಿರಿ.