ತೀರ್ಥಹಳ್ಳಿಯಲ್ಲಿ ರೈತರಿಂದ ಚುನಾವಣೆ ಬಹಿಷ್ಕಾರ!
– ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕತೆ ವಿರೋಧಿಸಿ ಸ್ವಘೋಷಿತ ನಿರ್ಧಾರ
– ತೀರ್ಥಹಳ್ಳಿ ತಾಲೂಕಿನ ಹಲವೆಡೆ ಮತ ಬಹಿಷ್ಕಾರ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಇದೀಗ ಮೂಲ ಸೌಲಭ್ಯ ಅವ್ಯವಸ್ಥೆ ಖಂಡಿಸಿ ಜನತೆ ಮತ ಬಹಿಷ್ಕಾರ ಮಾಡಲಾಗುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ರಾಷ್ಟ್ರೀಯ ಜಲ ಜೀವನ್ ಮಿಷನ್ ಅಡಿಯಲ್ಲಿ ಉದ್ದೇಶಿಸಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯು ಅವೈಜ್ಞಾನಿಕ ಕೇಂದ್ರೀಕೃತ ಹಾಗೂ ಜನ ವಿರೋಧಿ ಮತ್ತು ಪ್ರಕೃತಿ ವಿರೋಧಿ ಯೋಜನೆ ಆಗಿದೆ. ಇದನ್ನು ವಿರೋಧಿಸಿ ತುಂಗಾ ನದಿ ಮತ್ತು ಮಾಲತಿ ನದಿ ದಡಗಳ ರೈತರು, ಸಾರ್ವಜನಿಕರು ಕಳೆದ ಎಂಟು
ಪ್ರತಿಭಟನೆ ನಡೆಸಿ ಸರ್ಕಾರಗಳ ಗಮನವನ್ನು ಹಲವು ರೀತಿಯಲ್ಲಿ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಈ ಯೋಜನೆಯ ಕಾಮಗಾರಿ ನಡೆಸಲು ಸರ್ಕಾರಗಳು ಜನತಂತ್ರ ವಿರೋಧಿ ಮಾರ್ಗ ಹಿಡಿದು ಶಸ್ತ್ರಸಜ್ಜಿತ ಪೋಲೀಸರನ್ನು ನೇಮಿಸಿ ಜನರ ಮೇಲೆ ದಬ್ಬಾಳಿಕೆ ನಡೆಸಿವೆ. ಇದನ್ನು ವಿರೋಧಿಸಿ ಸ್ಥಳೀಯ ಜನತೆ ಕಳೆದ ಒಂದು ತಿಂಗಳ ಕಾಲ ಆ ಸ್ಥಳದಲ್ಲೇ ಧರಣಿ ಸತ್ಯಾಗ್ರಹದ ನಿರಶನದಲ್ಲಿ ನಿರತರಾಗಿದ್ದರೂ ಸರ್ಕಾರಗಳು ಚಳವಳಿಯನ್ನು ನಿರ್ಲಕ್ಷ್ಯದಿಂದ ನೋಡಿವೆ. ಇದರ ವಿರುದ್ಧದ ಪ್ರತಿಭಟನೆಯ ಇನ್ನೊಂದು ಮಾರ್ಗವಾಗಿ ನಾನು/ನನ್ನ ಕುಟುಂಬ 2024 ರ ಲೋಕಸಭಾ ಚುನಾವಣೆಯ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂಬ ನನ್ನ/ನಮ್ಮ ನಿರ್ಧಾರವನ್ನು ಈ ಮೂಲಕ ಘೋಷಿಸುತ್ತೇನೆ/ಘೋಷಿಸುತ್ತೇವೆ.