ಮೇ 5ರಿಂದ 8ರವರೆಗೆ ‘ಎಣ್ಣೆ ಅಂಗಡಿ’ ಇರಲ್ಲ!
– ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ಕ್ಷಣಗಣನೆ
– ಬೆಂಗಳೂರು -ಶಿವಮೊಗ್ಗ ವಿಶೇಷ ರೈಲು ಇರುತ್ತೆ
– ಮೇ 7ರ ಮತದಾನಕ್ಕೆ ಸರ್ಕಾರಿ ರಜೆ
– ಎಲ್ಲೆಡೆ ಸಿದ್ಧತೆ: ಗಡಿ ಭಾಗದಲ್ಲಿ ಅಲರ್ಟ್
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನ ಮೇ 7ಕ್ಕೆನಿಗದಿಯಾಗಿದೆ. ಈ ಹಿನ್ನಲೆಯಲ್ಲಿ ಶಾಂತಿ-ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಮೇ 5ರ ಸಂಜೆ 5 ಗಂಟೆಯಿಂದ ಮೇ 8ರ ಬೆಳಿಗ್ಗೆ ಗಂಟೆವರೆಗೆ ಜಿಲ್ಲೆಯಲ್ಲಿ ಎಲ್ಲಾ ಬಗೆಯ ಮದ್ಯ ಮಾರಾಟ-ಮದ್ಯ ಸಾಗಾಟ-ಮದ್ಯ ಸಂಗ್ರಹಣೆಯನ್ನು ಸರ್ಕಾರ ನಿಷೇಧಿಸಿದೆ.
ಮೇ 7ರ ಮತದಾನಕ್ಕೆ ಸರ್ಕಾರಿ ರಜೆ
ಮೇ 7ರಂದು ಮತದಾನ ನಡೆಯುವ ಪ್ರಯುಕ್ತ ಅಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಲು ಚುನಾವಣೆ ಆಯೋಗ ಮನವಿ ಮಾಡಿದೆ.
ಎಲ್ಲೆಡೆ ಸಿದ್ಧತೆ: ಗಡಿ ಭಾಗದಲ್ಲಿ ಅಲರ್ಟ್
ಮತದಾನಕ್ಕೆ ವೋಟಿಂಗ್ ಬೂತ್, ಭದ್ರತೆ, ಪೊಲೀಸ್ ಸಿಬ್ಬಂದಿ, ಚುನಾವಣೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಹಣ, ಹೆಂಡ ವಿರುದ್ಧ ಅಲರ್ಟ್ ಇಡಲಾಗಿದೆ.
ಮತದಾನಕ್ಕೆ ಬಂದು ಹೋಗಲು ವಿಶೇಷ ರೈಲು
ಮೇ -6 -2024 ಸೋಮವಾರ ಬೆಂಗಳೂರು ಸೇರಿ ವಿವಿಧ ಭಾಗದಿಂದ ಶಿವಮೊಗ್ಗಕ್ಕೆ ಬಂದು ಹೋಗಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಮೈಸೂರು – ತಾಳಗುಪ್ಪ
ಮೈಸೂರು – ರಾತ್ರಿ 9:30
ಬೆಂಗಳೂರು – ರಾತ್ರಿ 12:00
ಶಿವಮೊಗ್ಗ – ಬೆಳಗ್ಗೆ 6:10
ತಾಳಗುಪ್ಪ – ಬೆಳಗ್ಗೆ 9:00
ಮೇ -7-2024 ಮಂಗಳವಾರ
ತಾಳಗುಪ್ಪ – ಮೈಸೂರು
ತಾಳಗುಪ್ಪ – ಸಂಜೆ 6:30
ಶಿವಮೊಗ್ಗ – ರಾತ್ರಿ 8:30
ಬೆಂಗಳೂರು – ರಾತ್ರಿ 1:00
ಮೈಸೂರು – ಬೆಳಗ್ಗೆ 4:00