ಆಗುಂಬೆ ಘಾಟಿ ರಸ್ತೆ ತಡೆಗೋಡೆಯಲ್ಲಿ ಬಿರುಕು?!
– ಘನ ವಾಹನಗಳ ಓಡಾಟದಿಂದ ತಡೆಗೋಡೆಗಳಿಗೆ ಹಾನಿ
– ಮಳೆಗಾಲಕ್ಕೂ ಮುನ್ನ ಒಮ್ಮೆ ಪರಿಶೀಲಿಸಿ..!
NAMMUR EXPRESS NEWS
ಉಡುಪಿ: ಶಿವಮೊಗ್ಗ-ಉಡುಪಿ ಜಿಲ್ಲೆಗಳ ಪ್ರಮುಖ ಘಟ್ಟ ಪ್ರದೇಶ ಆಗುಂಭೆ ಘಾಟಿಯಲ್ಲಿ ಈ ಸಲ ಮತ್ತೆ ರಸ್ತೆ ತಡೆಗೋಡೆ ಕುಸಿತದ ಆತಂಕ ಎದುರಾಗಿದೆ. ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆ ಬಳಿ ಬಿರುಕು ಬಿಟ್ಟಿದ್ದು ಘನವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ ಎಂದು ಹೇಳಲಾಗಿದೆ. ಘಾಟಿಯ 14ನೇ ತಿರುವು ಸೂರ್ಯಾಸ್ತ ಸ್ಥಳದ ಬಳಿ ತಡೆಗೋಡೆ ಬಿರುಕು ಬಿಟ್ಟಿದ್ದು ಅದು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘನ ವಾಹನಗಳ ಓಡಾಟದಿಂದ ತಡೆಗೋಡೆಗಳಿಗೆ ಹಾನಿಯಾಗುತ್ತಿದ್ದು, ವಾಹನಗಳು ತಡೆಗೋಡೆಗೆ ಡಿಕ್ಕಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ವರದಿಯಲ್ಲಿ ಹೇಳಲಾಗಿದೆ.
ಮಳೆಗಾಲದಲ್ಲಿ ಘಾಟಿ ಬಂದ್ ಆಗದಿರಲಿ!
ಮಳೆಗಾಲದಲ್ಲಿ ಪದೇ ಪದೇ ಆಗುಂಬೆ ಘಾಟಿ ಬಂದ್ ಆಗುವುದರಿಂದ ಸಾವಿರಾರು ಜನರಿಗೆ ಸಮಸ್ಯೆ ಆಗುತ್ತಿದೆ. ಇದರಿಂದ ಅಧಿಕಾರಿಗಳು ತಕ್ಷಣ ಪರಿಶೀಲನೆ ಮಾಡಬೇಕು ಎಂದು ಜನತೆ ಅಗ್ರಹಿಸಿದ್ದಾರೆ.