ಕರ್ನಾಟಕ ಬ್ರೇಕಿಂಗ್ ನ್ಯೂಸ್
ಶಿವಮೊಗ್ಗ ಗ್ಯಾಂಗ್ ವಾರ್: ಮೂವರು ಬಲಿ!
– ಕೊಲೆ ಮಾಡಲು ಬಂದವರೇ ಬಲಿಯಾದರು
ಪ್ರವೀಣ್ ನೆಟ್ಟಾರು ಕೊಲೆ: ಹಂತಕ ಅರೆಸ್ಟ್!
– ಸಕಲೇಶಪುರದಲ್ಲಿ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಬಂಧನ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲಷ್ಕರ್ ಮೊಹಲ್ಲಾ ಮೀನು ಮಾರ್ಕೆಟ್ನಲ್ಲಿ ಹಾಡಹಗಲೇ ನಡೆದ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಕೊಲೆ ಮಾಡಲು ಬಂದ ರೌಡಿಶೀಟರ್ಗಲೇ ಕೊಲೆಯಾಗಿ ಬೀದಿ ಹೆಣವಾಗಿದ್ದಾರೆ. ರೌಡಿಗಳ ನಡುವೆ ಗ್ಯಾಂಗ್ ವಾರ್ ಆಗಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗ ಲಷ್ಕರ್ ಮೊಹಲ್ಲಾದಲ್ಲಿ ಕೊಲೆಯಾದ ರೌಡಶೀಟರ್ಗಳನ್ನು ಕೆ.ಆರ್. ಪುರಂ ನಿವಾಸಿ ಸುಹೇಲ್ ಅಲಿಯಾಸ್ ಕಲಂದರ್ (30) ಅಣ್ಣಾನಗರದ ಗೌಸ್ ಅಲಿಯಾಸ್ ಕಾಲಾಗೌಸ್ (32) ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಶಿವಮೊಗ್ಗದ ರೌಡಿಶೀಟರ್ ಯಾಸಿನ್ ಕೊಲೆ ಮಾಡುವುದಕ್ಕೆಂದು ಬಂದಿದ್ದು, ಸುಖಾ ಸುಮ್ಮನೇ ಖುರೇಶಿ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಗೌಸ್ ಮತ್ತು ಸುಹೇಲನ ಮೇಲೆ ಯಾಸಿನ್ ಖುರೇಶಿ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.
ರೌಡಿ ಶೀಟರ್ ಯಾಸಿನ್ ಖುರೇಶಿ ಕೊಲೆ ಮಾಡಲು 20ಕ್ಕೂ ಹೆಚ್ಚು ಬೈಕ್ಗಳಲ್ಲಿ ಮತ್ತೊಂದು ಗುಂಪಿನವರು ಅಟ್ಯಾಕ್ ಮಾಡಿದ್ದರು. ಮೊದಲು ಸುಹೇಲ್ ಮತ್ತು ಗೌಸ್ ಬಂದು ಜಗಳ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ, ಈ ವೇಳೆಗೆ ಯಾಸೀನ್ ಸಹಚರರು ದಾಳಿಯ ಮುನ್ಸೂಚನೆ ಅರಿತು ಇಬ್ಬರ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಗೌಸ್ ಮತ್ತು ಸುಹೇಲ್ ಕೊಲೆಯಾಗುತ್ತಿದ್ದಂತೆ ತಂಡದಲ್ಲಿದ್ದವರು ಪರಾರಿ ಆಗಿದ್ದಾರೆ. ಪೊಲೀಸರು ಬಂದು ಸುಹೇಲ್ ಮತ್ತು ಗೌಸ್ನ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡುವ ಮುನ್ನ ಸ್ಥಳ ಪರಿಶೀಲನೆ ಮಾಡಿದಾಗ ಮೃತ ರೌಡಿಗಳ ಬಳಿ ಲಾಂಗು, ಮಚ್ಚು, ಚಾಕು, ಚೂರಿ ಹಾಗು ಕ್ರಿಕೆಟ್ನ ವಿಕೆಟ್ಗಳು ಇರುವುದು ಪತ್ತೆಯಾಗಿವೆ. ಆಗ, ಕೊಲೆ ಮಾಡಲು ಬಂದವರೇ ಬೀದಿ ಹೆಣವಾಗಿ ಬಿದ್ದಿದ್ದಾರೆ ಎಂಬುದು ತಿಳಿದುಬಂದಿದೆ. ಯಾಸಿನ್ ಕೂಡ ಸಾವನ್ನು ಕಂಡಿದ್ದು ಮೂವರು ಸಾವನ್ನು ಕಂಡಿದ್ದಾರೆ.
ಇದೀಗ ಶಿವಮೊಗ್ಗ ನಗರ ಕೋಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಲಷ್ಕರ್ ಮೊಹಲ್ಲಾದ ಮೀನು ಮಾರ್ಕೆಟ್ ಬಳಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ.!
– ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಅರೆಸ್ಟ್
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್ ಎಂಬಾತನನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಮುಸ್ತಫಾ ಪೈಚಾರ್ ಗೆ ಎನ್ಐಎ ಲುಕ್ ಔಟ್ ನೋಟೀಸ್ನ್ನು ನೀಡಿದ್ದು ಮಾಹಿತಿ ಕೊಟ್ಟವರಿಗೆ 5 ಲಕ್ಷ ಬಹುಮಾನ ಕೂಡ ಘೋಷಿಸಿತ್ತು. ಇದೀಗ ಸಕಲೇಶಪುರದಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್ ನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.