ತೀರ್ಥಹಳ್ಳಿ ತಾಲೂಕಿನ 29 ಶಾಲೆಗೆ ಶೇ.100% ಫಲಿತಾಂಶ
– ಸರ್ಕಾರಿ ಶಾಲೆಗಳ ಉತ್ತಮ ಸಾಧನೆ: ತೀರ್ಥಹಳ್ಳಿ ತಾಲೂಕಿಗೆ ಶೇ.97.72 ಫಲಿತಾಂಶ
– ಹಳ್ಳಿ, ಕನ್ನಡ ಮಾಧ್ಯಮ ಶಾಲೆಗಳೂ ಬೆಸ್ಟ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸುಮಾರು 29 ಶಾಲೆಗಳು ಸುಮಾರು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ. ಈ ಪೈಕಿ 21 ಸರ್ಕಾರಿ ಶಾಲೆಗಳು, 2 ಅನುದಾನಿತ ಶಾಲೆಗಳು, ಆರು ಖಾಸಗಿ ಶಾಲೆಗಳು ಶೇ ನೂರರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ. ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಅತಿ ಹೆಚ್ಚು ಪಾರಮ್ಯವನ್ನು ಮೆರೆದಿದೆ. ಖಾಸಗಿ ಶಾಲೆಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದು ಅನೇಕ ರಾಂಕ್ ಗಳನ್ನು ಕೂಡ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಎಷ್ಟು ಜನ ಪಾಸ್… ಎಷ್ಟು ಜನ ಫೇಲ್?
ತೀರ್ಥಹಳ್ಳಿ ತಾಲೂಕಿನಲ್ಲಿ ಒಟ್ಟು 745 ಬಾಲಕರು, 835 ಬಾಲಕಿಯರು 1580 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಈ ಪೈಕಿ 716 ಬಾಲಕರು ಉತ್ತೀರ್ಣರಾಗಿದ್ದು, 828 ಬಾಲಕಿಯರು ಉತ್ತೀರ್ಣರಾಗಿದರೆ ಒಟ್ಟು 1544 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 29 ಬಾಲಕರು ಅನುತ್ತೀರ್ಣಗೊಂಡಿದ್ದು, 7 ಬಾಲಕಿಯರು ಅನುತ್ತೀರ್ಣಗೊಂಡಿದ್ದು ಒಟ್ಟು 36 ಜನ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಶೇ 97.72 ಫಲಿತಾಂಶ ಪಡೆದುಕೊಂಡಿದ್ದಾರೆ.
GHS ಬಿಳುಕೊಪ್ಪ 100%
GHS ಬಾವಿ ಕೈಸರು 100%
GHS ಆರ್. ಕೆ ಪುರ 100%
GHS ಕೊಂಡ್ಲುರು 100%
GHS ತನಿಕಲ್ 100%
GHS ಕುಡು ಮಲ್ಲಿಗೆ 100%
GHS ಮಟ್ಟಿಗರು 100%
GHS ತೂದೂರು 100%
GPUC ಮಳಲಿಮಕ್ಕಿ 100%
GHS ಗುಡ್ಡೆಕೊಪ್ಪ 100%
GHS ಮೇಳಿಗೆ 100%
GGPUC ತೀರ್ಥಹಳ್ಳಿ 100%
GHS ಕಟ್ಟೆ ಹಕ್ಲು 100%
GHS ಕನ್ನಂಗಿ 100%
GHS ಕೋಡ್ಲು 100%
GPUC ಆರಗ 100%
GHS ಕಡ್ತುರು 100%
GPUC ಬಸವಾನಿ 100%
GHS ಹೆದ್ದೂರು 100%
ಮೊರಾರ್ಜಿ ದೇಸಾಯಿ ವಾಟಗಾರು 100%
ಅಂಬೇಡ್ಕರ್ ಕೆರೇಹಳ್ಳಿ 100%
GPUC ಮೇಗರವಳ್ಳಿ 98.00%
GHS ಹುಂಚದ ಕಟ್ಟೆ 97.30%
DR. ಬಿ ಆರ್ ಅಂಬೇಡ್ಕರ್ ಸ್ಕೂಲ್ ಕುಡುಮಲ್ಲಿಗೆ 97.06%
GHS ಕೋಣಂದೂರು 96.15%
GHS ಮಂಡಗದ್ದೆ 95.83%
ಮುರಾರ್ಜಿ ತೀರ್ಥಹಳ್ಳಿ 94.87
GHS ಗುಡ್ಡೇಕೇರಿ 93.33%
GPUC ತೀರ್ಥಹಳ್ಳಿ 92.86%
GHS ನೋಣಬೂರು 90.91%
GPUC ಮಾಳೂರು 90.79%
ಅನುದಾನಿತ ಶಾಲೆಗಳು
NPUC ಕೋಣಂದೂರು 100%
ವಿಶ್ವತೀರ್ಥ ಹೆಚ್ಎಸ್ ಕನ್ನಡ 100%
SVS HS ಆಗುಂಬೆ 91.30%
ತಿಪ್ಪೇಸ್ವಾಮಿ HS 86.67
ಅನುದಾನ ರಹಿತ ಶಾಲೆಗಳು
ವಾಗ್ದೇವಿ ಎಚ್ಎಸ್ ತೀರ್ಥಹಳ್ಳಿ 100%
ಸಹ್ಯಾದ್ರಿ ಪಿಯುಸಿ 100%
ವಿಶ್ವತೀರ್ಥ ಇಂಗ್ಲೀಷ್ ಕಮ್ಮರಡಿ 100
ಪಿ ಬಿ ಹೆಚ್ ಎಸ್ ಚಿಟ್ಟೆಬೈಲು 100.00%
AVM HS ಆಗುಂಬೆ 100%
ಮಲೆನಾಡು HS 100%
ST, MARRYS HS ತೀರ್ಥಹಳ್ಳಿ 97.22
ನವಜ್ಯೋತಿ HS 97.22