- ಮತ್ತೆ ಕರೋನಾ ಅಟ್ಟಹಾಸದ ಸೂಚನೆ
- ಇಂಗ್ಲೆಂಡ್ ದೇಶದಿಂದ ಬಂದವರ ಪತ್ತೆ ಶುರು!
ಬೆಂಗಳೂರು: ಕರೋನಾ ಅಟ್ಟಹಾಸ ಕೊಂಚ ತಣ್ಣಗಾಗಿ ಇನ್ನೇನು ಜನ ಜೀವನ ಚೇತರಿಕೆಯಲ್ಲಿ ಸಾಗುತ್ತಿರುವಾಗ ಇದೀಗ ಮತ್ತೊಂದು ವೈರಸ್ ಸದ್ದು ಮಾಡುತ್ತಿದೆ.
ಕರೋನಾದ ಮತ್ತೊಂದು ರೂಪ ಎನ್ನಲಾದ ಓ50 ಟಥಿ ವೈರಸ್ ಇಂಗ್ಲೆಂಡ್ ದೇಶದಲ್ಲಿ ಭೀಕರ ಸದ್ದು ಮಾಡುತ್ತಿದೆ. ಅಲ್ಲಿ ಲಾಕ್ಡೌನ್ ಮಾಡಲಾಗಿದೆ. ಅಲ್ಲಿಂದ ಭಾರತಕ್ಕೆ ಬಂದವರ ಮೇಲೆ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಮುಂಬೈ ಅಲ್ಲಿ ರಾತ್ರಿ ಲಾಕ್ ಡೌನ್ ಮಾಡಲಾಗುತ್ತಿದೆ. ಅದೇ ರೀತಿ, ಇಂಗ್ಲೆಂಡ್ನಿಂದ ಶಿವಮೊಗ್ಗಕ್ಕೆ ಬಂದವರ ಮೇಲೂ ಆರೋಗ್ಯ ಇಲಾಖೆ ಕಣ್ಣಾವಲಿಟ್ಟಿದೆ.
ಸರ್ಕಾರದ ಸೂಚನೆ ಮೇರೆಗೆ ಇಂಗ್ಲೆಂಡ್ನಿಂದ ಪ್ರತಿ ತಾಲೂಕು, ಜಿಲ್ಲೆಗೆ ಬಂದವರ ಪತ್ತೆ ಕಾರ್ಯ ಶುರುವಾಗಿದೆ.
ಹತ್ತು ದಿನದ ಹಿಂದೆ ಇಂಗ್ಲೆಂಡ್ನಿಂದ ಬಂದವರನ್ನು ಗುರುತಿಸಿ, ಪರೀಕ್ಷೆಗೆ
ಒಳಪಡಿಸಲಾಗುತ್ತಿದೆ.
ಶಂಕಿತರನ್ನು ಕ್ಯಾರಂಟೈನ್ನಲ್ಲಿ ಇರಿಸಲಾಗಿದೆ. ಅಂತವರನ್ನು ಮನೆಯಿಂದ ಹೊರಬರಬಾರದು,
ಯಾರೊಂದಿಗೂ ಸಂಪರ್ಕ ಇರದಂತೆ ಆರೋಗ್ಯ
ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂಗ್ಲೆಂಡ್ ಸೇರಿ ಇತರೆ ದೇಶಗಳಿಂದ ಆಗಮಿಸಿದವರು ಸ್ವಯಂ ನಿರ್ಬಂಧ ಹಾಕಿಕೊಂಡು ಅರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಿದೆ. Iಜu ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.