- ಹುದ್ದೆ, ಗೌರವ, ಅಧಿಕಾರ ಶಾಶ್ವತವಲ್ಲ..
- ಸ್ನೇಹ, ಬಾಂಧವ್ಯ, ವಿಶ್ವಾಸ ಹಾಳು ಮಾಡಿಕೊಳ್ಳಬೇಡಿ!
ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಬುಧವಾರ(ನಾಳೆ) ಪ್ರಕಟಗೊಳ್ಳಲಿದೆ. ಇಡೀ ರಾಜ್ಯದಲ್ಲಿ ಗ್ರಾಮ ಸಮರ ಮುಕ್ತಾಯವಾಗಿ ಕೊನೆ ಹಂತಕ್ಕೆ ಬಂದಿದೆ.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಬದುಕಿನ ಸೋಲು ಗೆಲುವಿದ್ದಂತೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲುವವರು, ಗೆಲ್ಲುವವರು ನಮ್ಮವರೇ. ಆದರೆ ಯಾವುದೇ ಕಾರಣಕ್ಕೂ ದ್ವೇಷ ಬೇಡ, ಗ್ರಾಮದ, ಜನರ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಕೆಲಸ ಮಾಡೋಣ. ಇದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ. ಸೋಲು ಮುಂದಿನ ಚುನಾವಣೆಯ ಗೆಲುವಿನ ಮೆಟ್ಟಿಲಾಗಬಹುದು. ಯಾರೂ, ಯಾವುದೂ ಶಾಶ್ವತವಲ್ಲ. ಹುದ್ದೆ, ಗೌರವ, ಅಧಿಕಾರವೂ ಅಷ್ಟೆ.
ಚುನಾವಣೆಯ ಫಲಿತಾಂಶ ಏನೇ ಬಂದರೂ ಸ್ವೀಕರಿಸಲು ಸಿದ್ಧರಾಗಿ. ವೈಯಕ್ತಿಕ ದ್ವೇಷ, ಹಗೆ ಸಾಧನೆ ಬೇಡ. ಎಲ್ಲರೂ ಒಟ್ಟಾಗಿ ಬಾಳೋಣ, ಸೌಹಾರ್ದತೆಯಿಂದ ಜೀವಿಸೋಣ, ನಿಮ್ಮ ನಡೆ, ನುಡಿ ಇತರರಿಗೆ ಮಾದರಿಯಾಗಲಿ. ಗೆದ್ದವರನ್ನು ನಮ್ಮವರೆಂದು ಭಾವಿಸೋಣ. ಪಕ್ಷ, ಜಾತಿ, ಧರ್ಮದ ಹೆಸರಲ್ಲಿ ಬಾಂಧವ್ಯ, ಸ್ನೇಹ ಹಾಳು ಮಾಡಿಕೊಳ್ಳಬೇಡಿ. ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಫಲಿತಾಂಶವನ್ನು ತನ್ನ ಫೇಸ್ಬುಕ್ ಪೇಜ್ನಲ್ಲಿ ಪ್ರಕಟ ಮಾಡಲಿದೆ.