ಮೂವರು ಸಾಧಕ ವಿದ್ಯಾರ್ಥಿಗಳಿಗೆ ಮಲ್ನಾಡ್ ಕ್ಲಬ್ ಗೌರವ
– ಡಾ.ಟಿ ಎಲ್ ಶ್ರೀನಿವಾಸ್ ನೀಡಿದ ದೇಣಿಗೆ ಮೊತ್ತದಲ್ಲಿ ವಿದ್ಯಾರ್ಥಿ ವೇತನ ವಿತರಣೆ
NAMMUR EXPRESS NEWS
ತೀರ್ಥಹಳ್ಳಿ: ಮಲ್ನಾಡ್ ಕ್ಲಬ್ ಗೌರವ ಸದಸ್ಯರಾದ ಡಾ.ಟಿ ಎಲ್ ಶ್ರೀನಿವಾಸ್ ಇವರು ನೀಡಿದ ದೇಣಿಗೆ ಅನುದಾನದ ಬಡ್ಡಿ ಮೊತ್ತ ಹಾಗೂ ಮಲ್ನಾಡ್ ಕ್ಲಬ್ ಹೊಂದಾಣಿಕೆ ಮೊತ್ತದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮಲ್ನಾಡ್ ಕ್ಲಬ್ಬಿನಲ್ಲಿ ನಡೆಯಿತು. ಡಾ.ಯು ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿಯ ಕನ್ನಡ ಮಾಧ್ಯಮದ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಐಶ್ವರ್ಯ ಡಿ.ಬಿ.ಪಲ್ಲಗಟ್ಟೆ, ದಾವಣಗೆರೆ, ಧನೂಷ್ ಬಿ.ಎಸ್. ಬಿ-ಅಗ್ರಹಾರ ಕುರುವಳ್ಳಿ ತೀರ್ಥಹಳ್ಳಿ, ಭೂಮಿಕಾ ಎಸ್. ಜಿ ಸಾಲೆಕೊಪ್ಪ ಬಾವಿಕೈಸರು ತೀರ್ಥಹಳ್ಳಿ ಇವರನ್ನು ಗೌರವಿಸಿ ವಿದ್ಯಾರ್ಥಿ ವೇತನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಟಿ.ಎಲ್ ಶ್ರೀನಿವಾಸ್ ದಂಪತಿಗಳು ಹಾಗೂ ಕುಟುಂಬದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಅಭಿನಂದನಾ ಪತ್ರ ವಿತರಿಸಲಾಯಿತು. ಕ್ಲಬ್ ಸಾಮಾಜಿಕ ಕಾರ್ಯಗಳಿಗೆ ನಮ್ಮೊಂದಿಗೆ ಕೈಜೋಡಿಸಿದ ಡಾ. ಟಿ.ಎಲ್. ಶ್ರೀನಿವಾಸ್ ಹಾಗೂ ಕುಟುಂಬದವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ಲಬ್ ಆಡಳಿತ ಮಂಡಳಿಯವರು, ಸದಸ್ಯರು, ಫಲಾನುಭವಿಗಳು ಹಾಗೂ ಮಾಧ್ಯಮ ಮಿತ್ರರು ಹಾಜರಿದ್ದರು.