- ಫಲಿತಾಂಶ ಕುತೂಹಲ
ಬೆಂಗಳೂರು: ಗ್ರಾಮ ಪಂಚಾಯತಿಗಳ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆಯು ಬುಧವಾರ ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಎಣಿಕೆ ಪ್ರಾರಂಭವಾದ ತಕ್ಷಣ ಆರಂಭಿಕ ಮುನ್ನಡೆಗಳು ಬರಲಾರಂಭಿಸುತ್ತವೆ. ಆದರೆ ಅಂತಿಮ ಫಲಿತಾಂಶ ದಿನದ ಅಂತ್ಯದ ವೇಳೆಗೆ ಸ್ಪಷ್ಟವಾಗುತ್ತವೆ ಎಂದು ಹೇಳಲಾಗಿದೆ.
ಡಿ.22 ರಂದು ಪ್ರಾರಂಭವಾದ ಮೊದಲ ಹಂತದ ಮತದಾನ, ಭಾನುವಾರ ನಡೆದ ಎರಡನೆ ಹಂತದ ಮತದಾನದೊಂದಿಗೆ ಚುನಾವಣೆ ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ ಶೇ.80 ರಷ್ಟು ಮತದಾನ ದಾಖಲಾಗಿದ್ದರೆ, ಭಾನುವಾರ ನಡೆದ ಎರಡನೇ ಹಂತದಲ್ಲಿ ಈ ಸಂಖ್ಯೆ 80.71 ಕ್ಕೆ ಏರಿದೆ.
ಮೊದಲ ಹಂತದ ಮತದಾನದಲ್ಲಿ 117 ತಾಲ್ಲೂಕುಗಳಲ್ಲಿ 3,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಮತದಾನ ಮಾಡಿದ್ದವು. ಎರಡನೇ ಹಂತದಲ್ಲಿ 109 ತಾಲ್ಲೂಕುಗಳಲ್ಲಿ 2,709 ಪಂಚಾಯಿತಿಗಳಿಗೆ ಮತದಾನ ನಡೆದಿತ್ತು. ಎರಡೂ ಹಂತಗಳಲ್ಲಿ 72,616 ಸ್ಥಾನಗಳಿಗೆ 2,22,814 ಅಭ್ಯರ್ಥಿಗಳು ಕಣದಲ್ಲಿದ್ದರು. ಈಗಾಗಲೇ 8,074 ಅಭ್ಯರ್ಥಿಗಳು ಅವಿರೋಧವಾಗಿ ನ.30 ರಂದು ಗ್ರಾ.ಪಂ ಚುನಾವಣೆಯನ್ನು ಘೋಷಿಸಲಾಗಿತ್ತು.
6,004 ಗ್ರಾಮ ಪಂಚಾಯಿತಿಗಳಲ್ಲಿ 5,762 ಪಂಚಾಯತಿಗಳಿಗೆ ಮಾತ್ರ ಚುನಾವಣೆ ಘೋಷಿಸಲಾಯಿತು. 242 ಪಂಚಾಯಿತಿಗಳ ಚುನಾವಣೆ ವಿವಿಧ ಕಾರಣಗಳಿಂದ ನಡೆಯಲಿಲ್ಲ. ಆಯೋಗವು ಬೀದರ್ ಜಿಲ್ಲೆಯಲ್ಲಿ ಇವಿಎಂಗಳನ್ನು ಬಳಸಿದರೆ, ಇತರ ಸ್ಥಳಗಳಲ್ಲಿ ಮತದಾನಕ್ಕಾಗಿ ಮತಪತ್ರಗಳನ್ನು ಬಳಸಲಾಯಿತು.