ರಾಜ್ಯ, ರಾಷ್ಟ್ರ ಮಟ್ಟಕ್ಕೆ ತೀರ್ಥಹಳ್ಳಿ ವಿದ್ಯಾರ್ಥಿಗಳು!
– ರಾಷ್ಟ್ರಮಟ್ಟದ ಮೊಟ್ಟ ಮೊದಲ ಟಚ್ ರಗ್ಬಿ ಸ್ಪರ್ಧೆಯಲ್ಲಿ ಸೈoಟ್ ಮೇರಿಸ್ ಶಾಲೆ ವಿದ್ಯಾರ್ಥಿಗಳು
– 11 ವಿದ್ಯಾರ್ಥಿಗಳು ರಾಜ್ಯ, 7 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಇತ್ತೀಚಿಗೆ ಅನೇಕ ಯುವ ಪ್ರತಿಭಾವಂತರನ್ನು ನಾಡಿಗೆ ನೀಡುತ್ತಿದೆ. ನೂರಾರು ಮಂದಿ ಸಾಧಕರು ತಮ್ಮ ಸಾಧನೆ ತೋರುತ್ತಿದ್ದಾರೆ. ಈ ನಡುವೆ 2023-24ನೇ ಸಾಲಿನ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಟಚ್ ರಗ್ಬಿ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ ಸೈoಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಇಂದಿರಾನಗರ ತೀರ್ಥಹಳ್ಳಿ ಇಲ್ಲಿಯ 11 ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿ ಸಲಿದ್ದಾರೆ. ಅದರಲ್ಲಿ 7 ವಿದ್ಯಾರ್ಥಿಗಳು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಲಿದ್ದಾರೆ.
ವಿದ್ಯಾರ್ಥಿಗಳ ಹೆಸರು : ಸ್ಕಂದ ಪಿ, ಆದಿತ್ಯ ಸ್ ಪಿ, ಮೊಹಮ್ಮದ್ ಗೌಸ್, ಮೊಹಮ್ಮದ್ ಅಶ್ರಫ್, ವಿನಾಯಕ ಎಸ್ ಎಸ್, ನಿತೇಶ್ ಎಂ , ಆಯುಷ್ ಮ್, ಯುದಿತ್ ರಮೇಶ್, ರೊಯ್ಸ್ಟನ್ ಡಿಸೋಜಾ, ಕೇವಿನ ಮಚಾದೋ, ತನ್ಝೀಮ್. ಇವರೆಲ್ಲರಿಗೂ ಶಾಲೆಯ ಮಖ್ಯ ಉಪಾಧ್ಯಾಯಿನಿ, ಶಿಕ್ಷಕ ವೃಂದ , ಶಾಲೆಯ ಆಡಳಿತ ಮಂಡಳಿ, ಪೋಷಕರು ಮತ್ತು ವಿದ್ಯಾರ್ಥಿ ವೃಂದ ಶುಭ ಹಾರೈಸಿದೆ.
ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳು!
ಸ್ಕಂದ ಪಿ, ಆದಿತ್ಯ ಸ್ ಪಿ, ಮೊಹಮ್ಮದ್ ಗೌಸ್, ಮೊಹಮ್ಮದ್ ಅಶ್ರಫ್, ವಿನಾಯಕ ಎಸ್ ಎಸ್, ನಿತೇಶ್ ಎಂ , ಆಯುಷ್ ಮ್, ಯುದಿತ್ ರಮೇಶ್, ರೊಯ್ಸ್ಟನ್ ಡಿಸೋಜಾ, ಕೇವಿನ ಮಚಾದೋ, ತನ್ಝೀಮ್.