ತೀರ್ಥಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
– ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಹೋರಾಟ
– ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಗುಳುಂ: ಆರೋಪ
NAMMUR EXPRESS NEWS
ತೀರ್ಥಹಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಗೆ ಮೀಸಲಿಟ್ಟ 187 ಕೋಟಿ ರೂಪಾಯಿ ಹಣವನ್ನು ಪಕ್ಕದ ತೆಲಂಗಾಣ ರಾಜ್ಯಕ್ಕೆ ಚುನಾವಣೆಗೆಂದು ರಾಜ್ಯ ಸರ್ಕಾರದ ಹಣವನ್ನು ಟ್ರಾನ್ಸ್ಫರ್ ಮಾಡಲಾಗಿದೆ ಎಂದು ಆರೋಪಿಸಿತೀರ್ಥಹಳ್ಳಿಯಲ್ಲಿ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿತು. ಆರಗ ಜ್ಞಾನೇಂದ್ರ ಅವರು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿ ಯಾವ ನಿಗಮದಲ್ಲೂ ಕೂಡ ಹಣ ಇಲ್ಲದಂತ ಪರಿಸ್ಥಿತಿ ಬಂದಿದೆ. ಚಂದ್ರಶೇಖರ್ ಅವರು ಎಲ್ಲಾ ವಿಷಯ ಮತ್ತು ಸರ್ಕಾರದ ಬಗ್ಗೆ ಡೆತ್ ನೋಟ್ ಅನ್ನು ಬರೆದಿದ್ದಾರೆ. ಹಗಲಲ್ಲೇ ದರೋಡೆ ಮಾಡುತ್ತಿದೆ ಸರ್ಕಾರ,187 ಕೋಟಿ ಹಣವನ್ನು ಜಮಾ ಮಾಡಿ ನಂತರ ತೆಲಂಗಾಣ ಬ್ಯಾಂಕಿಗೆ ಇದೆ ಹಣ ಜಮಾ ಆಗಿದೆ. ಸಿದ್ದರಾಮಯ್ಯನವರು ಎಸ್ಐಟಿ ಅವರಿಗೆ ತನಿಖೆ ಮಾಡಲು ಮುಂದಾಗುತ್ತಾರೆ ಎಂದು ಆರೋಪ ಮಾಡಿದರು.
ಡೆತ್ ನೋಟ್ ನಲ್ಲಿ ಮಂತ್ರಿಗಳ ಒಪ್ಪಿಗೆಯ ಮೇಲೆ ಹಣವನ್ನು ಜಮಾ ಮಾಡಿದ್ದೇವೆ ಎಂದು ಬರೆದಿದ್ದಾರೆ. ಕಾಂಗ್ರೆಸ್ ಎಂದರೆ ಮೋಸ , ದರೋಡೆ ಮಾಡಿಕೊಂಡು ಹಣವನ್ನು ವಂಚನೆ ಮಾಡುತ್ತಿದ್ದಾರೆ ಈ ರೀತಿಯ ಸರ್ಕಾರಗಳು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಅಗ್ರಹಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕುಕ್ಕೆ ಪ್ರಶಾಂತ್!
ಕುಕ್ಕೆ ಪ್ರಶಾಂತ್ ರಾಜ್ಯದಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ 10 ಮಂಡಲಗಳಲ್ಲಿ ಇದೇ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಹೇಗೆ ಗ್ಯಾರೆಂಟಿಗಳನ್ನು ತಂದಿದ್ದು ಅದೇ ರೀತಿಯಲ್ಲಿ ಅಧಿಕಾರಿಗಳ ಹತ್ಯೆ ಕೂಡ ಜಾರಿಗೆ ತಂದಿದೆ. ಚಂದ್ರಶೇಖರ್ ಎನ್ನುವ ವ್ಯಕ್ತಿ ಆತ್ಮಹತ್ಯೆಯಾದ ನಂತರ, ಡೆತ್ ನೋಟ್ ನಲ್ಲಿ ಬರೆದ ಆಧಾರದ ಮೇಲೆ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ . ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ತೂಗುಗತ್ತಿ ತೂಗುತ್ತಾ ಇದೆ. ಈ ರೀತಿಯ ಹೋರಾಟಗಳು ಯಾಕೆ ಮಾಡುತ್ತಿದ್ದೇವೆ ಎಂದರೆ ಒಂದು ಕಡೆ ಅನಾಚಾರ ಇನ್ನೊಂದು ಕಡೆ ಸಾವಿನ ನ್ಯಾಯ, ಲೂಟಿ ಮಾಡುತ್ತಿರುವ ಈ ರೀತಿಯ ಪಕ್ಷಗಳು ತೊಲಗಬೇಕು ಎಂಬುದು ನಮ್ಮೆಲ್ಲರ ಹೋರಾಟ. ಭ್ರಷ್ಟನಿಗೆ ನೀವೇ ಬೆಂಬಲ ಕೊಟ್ಟರೆ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಚಿವ ಸಂಪುಟದಿಂದ ನಾಗೇಂದ್ರ ರವರನ್ನು ಕೈಬಿಡಬೇಕು, ಅವರು ರಾಜೀನಾಮೆ ಕೊಡಬೇಕು ಸರ್ಕಾರ ಈ ಪ್ರಕರಣದಲ್ಲಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟು ಮಾನಸಿಕ ಹಿಂಸೆ ಕೊಟ್ಟು ಶಿವಮೊಗ್ಗದಲ್ಲಿ ಒಬ್ಬ ಅಧಿಕಾರಿ ಸಾವಿಗೆ ಶರಣಾಗಿದ್ದಾರೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ಆಗಬೇಕು. ಅದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೀರ್ಥಹಳ್ಳಿಯ ಕೊಪ್ಪ ಸರ್ಕಲ್ಲಿನಲ್ಲಿ ಬಿಜೆಪಿ ಯುವ ಮೋರ್ಚಾ, ಪ್ರತಿಭಟನೆ ಮಾಡಿ ಮಾನವ ಸರಪಳಿಯ ರಚನೆ ಮಾಡಿ ರಸ್ತೆ ತಡೆದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಚಿವ ನಾಗೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು.
ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆ ಮಾಡಿದ್ರು ಮಾನವ ಸರಪಳಿ ರಚನೆ ಮಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಬಾಳೆಬೈಲು ರಾಘವೇಂದ್ರ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂತೋಷ್ ದೇವಾಡಿಗ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಮಧುರಾಜ್ ಹೆಗ್ಡೆ, ಮಹಾಂತಗೌಡ, ಚೇತನ್ ಗಡಿಕಲ್, ಹಾಗೂ ಮಂಡಲದ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಉಪಸ್ಥಿತಿ ಇದ್ದರು.