- ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಸೇರಿ ಎಲ್ಲೆಡೆ ಜಿಟಿಜಿಟಿ ಮಳೆ
- ಅಡಿಕೆ, ಭತ್ತದ ಕೊಯ್ಲು: ರೈತರಿಗೆ ಆತಂಕ
ತೀರ್ಥಹಳ್ಳಿ/ಕೊಪ್ಪ: ಮಲೆನಾಡಿನ ಬಹುತೇಕ ಕಡೆ ಭಾನುವಾರ ಜಿಟಿ ಜಿಟಿ ಮಳೆ ಶುರುವಾಗಿದ್ದು, ರೈತರಿಗೆ ಆತಂಕ ತಂದಿಟ್ಟಿದೆ.
ಅಡಿಕೆ ಮತ್ತು ಭತ್ತದ ಕೊಯ್ಲು ಸಮಯವಾದ್ದರಿಂದ ಅನೇಕ ಕಡೆ ಕೃಷಿ ಚಟುವಟಿಕೆ ಈಗ ಬಿರುಸು ಪಡೆದಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಈಗ ಎಲ್ಲರೂ ಕೃಷಿ ಮೇಲೆ ಗಮನ ಹರಿಸಿದ್ದಾರೆ. ಇಂತಹ ಸಮಯದಲ್ಲಿ ಜಿಟಿಜಿಟಿ ಮಳೆ ಆತಂಕಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ, ಕೊಪ್ಪ,ಶೃಂಗೇರಿ ಭಾಗದಲ್ಲಿ ಮಳೆಯಾಗಿದೆ. ಇನ್ನೂ ಮಳೆಯಾಗುವ ಸಾಧ್ಯತೆ ಇದೆ.