ದೇಶದಲ್ಲಿ ಸುಳ್ಳಾದ ಸಮೀಕ್ಷೆಗಳು..!
– ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ಸಮೀಕ್ಷೆಗಳು ಫೇಲ್
– ಜನರ ನಂಬಿಕೆ ಕಳೆದುಕೊಂಡ ಸಮೀಕ್ಷೆಗಳು
– ರಾಜ್ಯದಲ್ಲಿ ಕೂಡ ವಿಧಾನ ಸಭೆಯಲ್ಲಿ ಸುಳ್ಳಾಗಿತ್ತು!
NAMMUR EXPRESS NEWS
ಬೆಂಗಳೂರು/ನವದೆಹಲಿ: ದೇಶದಲ್ಲಿ ಚುನಾವಣಾ ರಾಜಕೀಯದ ಸಮೀಕ್ಷೆ ಈಗ ಸಂಸ್ಥೆಗಳ ವಿಶ್ವಾಸಾರ್ಹತೆ ಇದೀಗ ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ದೇಶದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದ ವಿವರವನ್ನು ನೋಡುವಾಗ ಈಗಾಗಲೇ ಸಮೀಕ್ಷೆಗಳು ಹೇಳಿದಂತೆ ಯಾವುದೇ ಸಮೀಕ್ಷೆ ಕೂಡ ಇಲ್ಲಿ ನಿಜವಾಗಿಲ್ಲ. ಅದೇ ರೀತಿಯಾಗಿ ಬಿಜೆಪಿ ಹಾಗೂ ಎನ್ ಡಿ ಎ, ಯುಪಿಎ ಸರ್ಕಾರಗಳ ಅಂಕಿ ಅಂಶಗಳಲ್ಲಿ ಭಾರಿ ಬದಲಾವಣೆಗಳಾಗಿದ್ದು, ಜನ ಕೊಟ್ಟ ಉತ್ತರ ವಿಭಿನ್ನವಾಗಿದೆ. ದೇಶದಲ್ಲಿ ನಡೆಸಿದ ಒಂದೇ ಒಂದು ನಿಜವಾಗದೇ ಇರುವುದು ಇದೀಗ ವಿಶ್ವಾಸಾರ್ಹತೆಗೆ ಪೆಟ್ಟು ಬಿದ್ದಿದೆ. ಈಗಾಗಲೇ ರಾಜಕೀಯ ವಿಚಾರದಲ್ಲಿ ಈ ಹಿಂದೆ ಕೂಡ ಕರ್ನಾಟಕ ರಾಜಕೀಯದಲ್ಲಿ ಸಮೀಕ್ಷೆಗಳು ಸಂಪೂರ್ಣ ಸುಳ್ಳಾಗಿದ್ದವು. ಈಗ ದೇಶ ರಾಜಕಾರಣದಲ್ಲೂ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ.
ಸಮೀಕ್ಷೆ ಹೇಳಿದ್ದು ಏನು?
ದೇಶ ಹಾಗೂ ರಾಜ್ಯದ ಎಲ್ಲಾ ಚುನಾವಣೆ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಎನ್.ಡಿ. ಎ 350ಕ್ಕೂ ಹೆಚ್ಚು ಸ್ಥಾನ, ಇಂಡಿಯಾ ಒಕ್ಕೂಟ 150, ಇತರೆ 30 ತೋರಿಸಿದ್ದವು.
ಸದ್ಯದ ಸ್ಥಿತಿ ಏನಿದೆ?
ಎನ್.ಡಿ.ಎ -295
ಇಂಡಿಯಾ ಒಕ್ಕೂಟ-227
ಇತರೆ -21
ರಾಜ್ಯದಲ್ಲಿ ಹೇಳಿದ್ದು?
ಬಿಜೆಪಿ-ಜೆಡಿಎಸ್ – 23 ಗರಿಷ್ಠ
ಕಾಂಗ್ರೆಸ್ -5
ಫಲಿತಾಂಶ ಆಗಿದ್ದು?
ಬಿಜೆಪಿ -ಜೆಡಿಎಸ್ -18
ಕಾಂಗ್ರೆಸ್ 10