ದೇಶದಲ್ಲೇ ಗಮನ ಸೆಳೆದ ಡಾ.ಮಂಜುನಾಥ್ ಗೆಲುವು!
– ಡಿಸಿಎಂ ಶಿವಕುಮಾರ್ ಸಹೋದರ ಸುರೇಶ್ ಅವರಿಗೆ ಸೋಲಿನ ಇಂಜೆಕ್ಷನ್
– ಜನರ ಮನಸ್ಸು ಗೆದ್ದ ಡಾಕ್ಟರ್ ರಾಜಕೀಯದಲ್ಲೂ ಗೆದ್ರು!
– ಜನ ಮನಸ್ಸು ಮಾಡಿದ್ರೆ ಏನಾದ್ರು ಆಗುತ್ತೆ ಎನ್ನುವುದಕ್ಕೆ ನಿದರ್ಶನ
NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲೆ ಗಮನ ಸೆಳೆದಿದ್ದ, ಹೈ ವೋಲ್ಟೇಜ್ ಕಣವಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಹೃದಯ ತಜ್ಞ, ಪ್ರಾಮಾಣಿಕ ವ್ಯಕ್ತಿ ಎಂದೆ ಹೆಸರು ಪಡೆದಿರುವ ಸಿಂಪಲ್ ನಾಯಕ ಡಾ. ಮಂಜುನಾಥ್ ಗೆಲುವನ್ನು ಸಾಧಿಸಿದ್ದಾರೆ. ದೇವೇಗೌಡ ಅವರ ಅಳಿಯ ಗೆಲುವು ಸಾಧಿಸಿದ್ದಾರೆ. ಇಲ್ಲಿ ಸೋಲು ಖಚಿತ ಎನ್ನುವ ಸ್ಥಿತಿ ಇತ್ತು. ಏಕೆಂದರೆ ಗ್ರಾಮಾಂತರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಡಿಕೆಶಿ, ಡಿಕೆಸು ತಮ್ಮದೇ ಪ್ರಭಾವ ಹೊಂದಿದ್ದಾರೆ. 1.90 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಇದೀಗ ಭಾರೀ ಚರ್ಚೆ ಸೃಷ್ಟಿ ಆಗಿದೆ.
ಡಿ.ಕೆ.ಶಿವಕುಮಾರ್ ಅವರ ಸಹೋದರ, ಹಾಲಿ ಸಂಸದ, ಡಿಕೆ ಸುರೇಶ್ ಅವರಿಗೆ ಸೋಲಾಗುವ ಮೂಲಕ ಜನ ನಿರ್ಧರಿಸಿದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ. ಮತ ಎಣಿಕೆ ಮೊದಲಿನಿಂದಲೂ ಅಂತರವನ್ನು ಕಾಯ್ದುಕೊಂಡು ಬಂದಿದ್ದ ಮಂಜುನಾಥ್ ಇದೀಗ ಗೆಲುವನ್ನು ಸಾಧಿಸಿದ್ದು, ಎಲ್ಲೆಡೆ ಸಂಭ್ರಮ ವ್ಯಕ್ತವಾಗುತ್ತಿದೆ. ಜೊತೆಗೆ ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ಕೂಡ ಬೆಂಗಳೂರು ಗ್ರಾಮಾಂತರ ಹೊರಹೊಮ್ಮಿದೆ. ಡಾ. ಮಂಜುನಾಥ್ ಆರೋಗ್ಯ ತಜ್ಞರಾಗಿ, ಜಯದೇವ್ ಆಸ್ಪತ್ರೆಯ ಮುಖ್ಯಸ್ಥರಾಗಿ ಸಾವಿರಾರು ಜನರಿಗೆ ಅನುಕೂಲವಾಗಿತ್ತು.
ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲಿನ ವಲಯದಲ್ಲಿ ಹೃದಯ ಚಿಕಿತ್ಸೆಗಾಗಿ ಬರುವ ಸಾಮಾನ್ಯ ಜನರನ್ನು ಮಾತನಾಡಿಸಿ ಅವರಿಗೆ ಚಿಕಿತ್ಸೆ ನೀಡುವ ಮೂಲಕ ಸೇವೆ ನೀಡಿದ್ದರು. ಜನ ಸೇವೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ವ್ಯಕ್ತಿಗೆ ಜನ ಕೈಹಿಡಿದಿದ್ದಾರೆ. ಡಿ ಕೆ ಸುರೇಶ್ ಅವರಿಗೆ ಸೋಲಾಗಿದೆ.