ರಾಘವೇಂದ್ರ ಗೆಲುವು: ವಿಜಯೋತ್ಸವ..!
– ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ
– ಶಿವಮೊಗ್ಗ ಕ್ಷೇತ್ರದಲ್ಲಿ ಯಾವ ತಾಲೂಕಲ್ಲಿ ಎಷ್ಟು ಲೀಡ್..?
– ಶಿವಮೊಗ್ಗದಲ್ಲಿ ರೋಡ್ ಶೋ: ಪ್ರತಿ ತಾಲೂಕಲ್ಲೂ ಸಂಭ್ರಮ
NAMMUR EXPRESS NEWS
ಶಿವಮೊಗ್ಗ: ರಾಘವೇಂದ್ರ ಗೆಲುವು ಹಿನ್ನೆಲೆ ಶಿವಮೊಗ್ಗ ಜಿಲ್ಲೆ ಸೇರಿ ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮಾಡಿದರು. ಬಿಜೆಪಿ ಹಾಗೂ ಯುವ ಮೋರ್ಚಾದಿಂದ ಲೋಕಸಭಾ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಿದ್ದು,ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖರು, ನಾಯಕರು, ಯುವ ಮೋರ್ಚಾದ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.
ಶಿವಮೊಗ್ಗ ಜಿಲ್ಲೆಯ ಯಾವ ತಾಲೂಕಲ್ಲಿ ಎಷ್ಟು ಲೀಡ್?
ಶಿವಮೊಗ್ಗದಲ್ಲಿ 48 ಸಾವಿರ, ಭದ್ರಾವತಿ 6 ಸಾವಿರ, ಸಾಗರ 20 ಸಾವಿರ, ಸೊರಬದಲ್ಲಿ 20 ಸಾವಿರ, ಶಿವಮೊಗ್ಗ ಗ್ರಾಮಾಂತರ 30 ಸಾವಿರ, ತೀರ್ಥಹಳ್ಳಿ 34 ಸಾವಿರ, ಬೈಂದೂರು 51 ಸಾವಿರ, ಶಿಕಾರಿಪುರದಲ್ಲಿ 12 ಸಾವಿರ ಮತಗಳ ಅಂತರದ ಮುನ್ನಡೆ ದೊರೆತಿದೆ ಎನ್ನಲಾಗಿದೆ. ಅಂತಿಮ ಮತ ಇನ್ನು ಮಾಹಿತಿ ಸಿಗಬೇಕಿದೆ.
ತೀರ್ಥಹಳ್ಳಿಯಲ್ಲಿ ವಿಜಯೋತ್ಸವ
ಬಿಜೆಪಿಯ ಕಚೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಸಿಹಿಯನ್ನ ಹಂಚಿ ಕೊಪ್ಪ ಸರ್ಕಲ್ ನಲ್ಲಿ ಪಟಾಕಿಯನ್ನು ಹೊಡೆದು ಸಂಭ್ರಮಾಚರಿಸಿದರು. ಬಳಿಕ ಮಾತನಾಡಿದ ಮೇಗರವಳ್ಳಿ ರಕ್ಷಿತ್ ಬಿ ವೈ ರಾಘವೇಂದ್ರ ರವರು ನಿರೀಕ್ಷಿತವಾಗಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ತೀರ್ಥಹಳ್ಳಿಯಲ್ಲೂ ಕೂಡ ಬಾರಿ ನಿರೀಕ್ಷೆಯ ಲೀಡನ್ನು ನಾವು ಕೊಟ್ಟಿದ್ದೇವೆ, ಇದೆಲ್ಲಾ ಕಾರ್ಯಕರ್ತರ ಶ್ರಮ. ಅವರಿಗೆ ಈ ಸಂದರ್ಭದಲ್ಲಿ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದರು.
ತೀರ್ಥಹಳ್ಳಿ ನಗರ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಕಾಂಗ್ರೆಸಿನ ಗ್ಯಾರಂಟಿಯ ಮಧ್ಯೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಹಾಗೇನೆ ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಬಿಜೆಪಿಯ ಭದ್ರಕೋಟೆ, 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಲೀಡ್ ಬಂದಿದೆ, ತೀರ್ಥಹಳ್ಳಿಯ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದಾರೆ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಎಂದರು.
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂತೋಷ್ ದೇವಾಡಿಗ, ತೀರ್ಥಹಳ್ಳಿ ತಾಲೂಕಿನ ಎಲ್ಲಾ ಮತದಾರರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು. ಕಾಸರವಳ್ಳಿ ಶ್ರೀನಿವಾಸ್, ನವೀನ್, ಸಂತೋಷ್ ಸೇರಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಮತ್ತು ಬಿಜೆಪಿ ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.