ರಾಹುಲ್ ಎರಡು ಕ್ಷೇತ್ರಗಳಲ್ಲೂ 3.50 ಲಕ್ಷಕ್ಕಿಂತ ಹೆಚ್ಚು ಲೀಡ್!
– ವಯನಾಡ್, ರಾಯ್ ಬರೇಲಿ ಗೆಲುವು: ಸ್ಮೃತಿ ಇರಾನಿಗೆ ಸೋಲು
– ಅತೀ ಹೆಚ್ಚು ಲೀಡ್ ಪಡೆದ ಅಮಿತ್ ಶಾ: ಗಾಂಧಿನಗರದಲ್ಲಿ 7.5 ಲಕ್ಷ ಲೀಡ್
– ವಾರಣಾಸಿಯಲ್ಲಿ ಮೋದಿ ಗೆಲುವು
– ಅಯೋಧ್ಯೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ!
NAMMUR EXPRESS NEWS
ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಕೆಲವೊಂದು ಕಡೆ ಅಚ್ಚರಿ ಘಟನೆಗಳು ನಡೆದಿದೆ. ಈ ಬಾರಿ ಚುನಾವಣೆಯ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಇನ್ನು ಅಚ್ಚರಿ ಬೆಳವಣಿಗೆಯಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನವನ್ನು ಪಡೆದಿದೆ. ಇನ್ನು ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಕೂಡ ಬಿಜೆಪಿ ಸೋಲು ಕಂಡಿದ್ದು ವಾರಣಾಸಿಯಲ್ಲಿ ಮೋದಿ ಗೆಲುವನ್ನ ಸಾಧಿಸಿದ್ದಾರೆ.
ರಾಹುಲ್ ಗಾಂಧಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರದಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ದೇಶದಲ್ಲಿ ಹೆಚ್ಚು ಗೆಲುವನ್ನ ಸಾಧಿಸುವ ನಾಯಕರಾಗಿದ್ದಾರೆ. ಇನ್ನೂ ಸಚಿವೆ ಸ್ಮೃತಿ ಇರಾನಿ ಸೋಲು ಕಂಡಿದ್ದು 1.43 ಲಕ್ಷ ಮತಗಳ ಅಂತರದಿಂದ ಕಿಶೋರ್ ಲಾಲ್ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಅತೀ ಹೆಚ್ಚು ಲೀಡ್ ಪಡೆದ ಅಮಿತ್ ಶಾ: ಗಾಂಧಿನಗರದಲ್ಲಿ 7.5 ಲಕ್ಷ ಲೀಡ್
ಅಮಿತ್ ಶಾ ಗಾಂಧಿನಗರದಲ್ಲಿ ಸ್ಪರ್ಧೆ ಮಾಡಿದ್ದು 10 ಲಕ್ಷಕ್ಕಿಂತ ಹೆಚ್ಚು ಮತವನ್ನು ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಾಮ್ ಅವರ ವಿರುದ್ಧ 7.5 ಲಕ್ಷ ಇದಕ್ಕಿಂತ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ದೇಶದಲ್ಲಿ ಕೆಲವು ಕ್ಷೇತ್ರಗಳು ಅಚ್ಚರಿಯನ್ನ ಉಂಟುಮಾಡಿವೆ.
ವಾರಣಾಸಿಯಲ್ಲಿ ಮೋದಿ ಗೆಲುವು
ವಾರಣಾಸಿಯಿಂದ ಸ್ಪರ್ಧೆ ಮಾಡಿದ ಮೋದಿ 6,11,439 ಮತವನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಮ್ ವಿರುದ್ಧ 1.52,355 ಮತಗಳಿಂದ ಗೆಲುವನ್ನ ಸಾಧಿಸಿದ್ದಾರೆ. ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014 ಹಾಗೂ 2019ರಲ್ಲಿ ಇದೇ ವಾರಾಣಸಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ಬಾರಿಯೂ ಗೆಲುವಿನ ನಗೆ ಬೀರುವ ಮೂಲಕ ಹ್ಯಾಟ್ರಿಕ್ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಪ್ರಾರಂಭದ ಕೆಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರು ಪರಾಜಯಗೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ 62ರಿಂದ 35ಕ್ಕೆ ಕುಸಿತ ಕಂಡಿದೆ. ಈ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು ಏಕಾಂಗಿಯಾಗಿ 272 ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದೆ.
ಅಯೋಧ್ಯೆಯಲ್ಲಿ ಸೋಲು ಕಂಡ ಬಿಜೆಪಿ!
ಶ್ರೀರಾಮ ಜನ್ಮ ಭೂಮಿ ಅಯೋಧ್ಯೆ ವ್ಯಾಪ್ತಿಯ ನೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿರುವುದು ಅಚ್ಚರಿ ಮೂಡಿಸಿದೆ.ಶ್ರೀರಾಮ ಮಂದಿರ ನಿರ್ಮಿಸಿ, ರಾಮನ ಪ್ರತಿಷ್ಠಾಪನೆ ಮಾಡುವ ಮೂಲಕ ಉತ್ತರ ಪ್ರದೇಶ ಸೇರಿದಂತೆ ದೇಶ ಹಾಗೂ ದೇಶಾದ್ಯಂತ ಪ್ರಸಿದ್ದಿಯಾಗಿದ್ದ ಅಯೋಧ್ಯೆಯನ್ನೊಳಗೊಂಡ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸಮಾಜವಾದಿ ಪಾರ್ಟಿ ಮುನ್ನಡೆ ಸಾಧಿಸಿದೆ.
ಬಿಜೆಪಿಯ ಅಭ್ಯರ್ಥಿ ಲಾಲು ಸಿಂಗ್ ಅವರು ಸಮಾಜವಾದಿ ಪಾರ್ಟಿಯ ಅಭ್ಯರ್ಥಿ ಅವದೇಶ್ ಪ್ರಸಾದ್ ಅವರ ರುದ್ಧ 10 ಸಾರಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದರು.ಮತ ಏಣಿಕೆ ಆರಂಭದಿಂದಲೂ ಬಿಜೆಪಿ ನ್ನೆಡೆ ಅನುಭಸಿದ್ದು ಗಮನ ಸೆಳೆದಿತ್ತು. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 40 ಸ್ಥಾನಗಳಲ್ಲಿ ಇಂಡಿ ಒಕ್ಕೂಟದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿ, ಹಲವು ಕ್ಷೇತ್ರಗಳಲ್ಲಿ ಜಯದ ನಗೆ ಬೀರಿದರು.