-ಆರೋಗ್ಯ ವೃದ್ಧಿಸೋ ಡ್ರೈಫ್ರೂಟ್
-ಪುಟ್ಟ ದ್ರಾಕ್ಷಿಯಲ್ಲಿರೋ ದೊಡ್ಡ ರಹಸ್ಯ
ನಮ್ಮ ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡದೊಡ್ಡ ರೋಗಗಳು ಬಾರದಂತೆ ಕಾಪಾಡುವ ಔಷಧ ಗುಣಗಳು ಇವೆ. ಆದರೆ ಇದರ ಬಗ್ಗೆ ನಮಗೆ ಅಸಡ್ಡೆಯೇ ಹೆಚ್ಚು. ಆಯುರ್ವೇದದ ಪ್ರಕಾರ ನಾವು ಬಳಸೋ ಆಹಾರ ಪದಾರ್ಥಗಳು ಔಷಧ ಗುಣಗಳನ್ನು ಹೊಂದಿದ್ದು, ಈ ಪದಾರ್ಥ ಗಳಲ್ಲಿ ಪ್ರಮುಖವಾಗಿ ಒಣದ್ರಾಕ್ಷಿಯು ಒಂದಾಗಿದೆ.
ರಾತ್ರಿ ಮಲಗುವ ಮುನ್ನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಈ ನೀರನ್ನು ಕುಡಿಯುವುದರಿಂದ ಕರುಳು ಸ್ವಚ್ಚವಾಗುತ್ತದೆ ಮತ್ತು ರಕ್ತವು ಶುದ್ಧಿಯಾಗುತ್ತದೆ, ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಾಗುತ್ತದೆ. ಒಣದ್ರಾಕ್ಷಿಯಲ್ಲಿ ಅಪಾರ ಪ್ರಮಾಣದ ಕಬ್ಬಿಣಾಂಶವು ಇರುವುದರಿಂದ ರಕ್ತಹೀನತೆ ತೊಂರೆಯಾಗದಂತೆ ಕಾಪಾಡುತ್ತದೆ.
ಇದು ಜೀರ್ಣಶಕ್ತಿ,ಹಾಗೂ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುವುದರ ಜೊತೆಗೆ ಮೂತ್ರಪಿಂಡಗಳಲ್ಲಿ ಸಂಗ್ರಹವಾಗುವ ಕಶ್ಮಲಗಳನ್ನು ಇದು ನಿವಾರಿಸುತ್ತದೆ.
ನೆನೆಸಿಟ್ಟ ಒಣ ದ್ರಾಕ್ಷಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು, ಬಾಯಿ, ಒಸಡು, ಹಲ್ಲುಗಳಲ್ಲಿರುವಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ದೂರಮಾಡುತ್ತದೆ.
ಒಣದ್ರಾಕ್ಷಿಯಲ್ಲಿ ಅತ್ಯಧಿಕ ಪ್ರಮಾಣ ಕ್ಯಾಲ್ಸಿಯಂ ಹಾಗೂ ಹಲವು ಪೋಷಕಾಂಶಗಳಿದ್ದು, ಮೂಳೆಗಳ ಆರೋಗ್ಯಕ್ಕೆ ಅತ್ಯುತ್ತಮ ಮತ್ತು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಇದರಲ್ಲಿ ವಿಟಮಿನ್ ಎ, ಬಿಟಾ ಕ್ಯಾರೋಟಿನ್ ಗುಣವು ಕಣ್ಣಿನ ಆರೋಗ್ಯವನ್ನು ಹೆಚ್ಚಿಸಿ ದೃಷ್ಟಿ ಹೀನತೆಯನ್ನು ತಡೆಯುತ್ತದೆ.