ಉಡುಪಿ: ಹೃದಯಾಘಾತವಾಗಿದ್ದ ಬಸ್ ಚಾಲಕ ಸಾವು!
– ಬ್ರಹ್ಮಾವರದ ಖಾಸಗಿ ಶಾಲೆಯ ಬಸ್ ಚಾಲನೆ ವೇಳೆ ಘಟನೆ
– 65 ಮಕ್ಕಳನ್ನು ಪಾರು ಮಾಡಿ ಇಹಲೋಕ ತ್ಯಜಿಸಿದ ಡ್ರೈವರ್!
NAMMUR EXPRESS NEWS
ಉಡುಪಿ: ಉಡುಪಿಯಲ್ಲಿ ಶಾಲಾ ಬಸ್ ಚಾಲನೆ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಬಸ್ ಚಾಲಕ ಅಲ್ವಿನ್ ಡಿಸೋಜಾ(53) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬ್ರಹ್ಮಾವರದ ಖಾಸಗಿ ಶಾಲೆಯ ಬಸ್ನಲ್ಲಿ ಮಕ್ಕಳನ್ನು ಮಣಿಪಾಲಕ್ಕೆ ಕರೆದೊಯ್ಯುತ್ತಿರುವ ವೇಳೆ ಪೆರಂಪಳ್ಳಿ ಬಳಿ ಅವರಿಗೆ ಲಘು ಹೃದಯಾಘಾತವಾಗಿತ್ತು. ಕೂಡಲೇ ಸಮಯಪ್ರಜ್ಞೆ ಮೆರೆದಿದ್ದ ಅಲ್ವಿನ್ ಅವರು ಬಸ್ನ್ನು ಚರಂಡಿಗೆ ಇಳಿಸಿ ದೊಡ್ಡ ಮಟ್ಟದಲ್ಲಿ ಆಗುವ ಅಪಘಾತವನ್ನು ತಪ್ಪಿಸಿದ್ದರು. ಈ ಘಟನೆಯಲ್ಲಿ ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ದೊಡ್ಡ ದುರಂತವನ್ನು ತಪ್ಪಿಸಿ ಮಕ್ಕಳನ್ನು ಪಾರು ಮಾಡಿರುವುದಕ್ಕೆ ಅಲ್ವಿನ್ ಅವರಿಗೆ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ, ಎಲ್ಲರೂ ಲಘು ಹೃದಯಾಘಾತವೆಂದು ತಿಳಿದುಕೊಂಡಿದ್ದರು. ಆದರೆ ಇದೀಗ ವಿಧಿಯಾಟಕ್ಕೆ ಬಲಿಯಾಗಿದ್ದು, ಮಕ್ಕಳ ಜೀವ ಉಳಿಸಿದ ಅಲ್ವಿನ್ ಡಿಸೋಜಾ ಕೊನೆಯುಸಿರೆಳೆದಿದ್ದಾರೆ.
65 ಮಕ್ಕಳು ಪಾರು: ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ!
ಚಾಲನೆಯಲ್ಲಿರುವಾಗಲೇ ಶಾಲಾ ವಾಹನದ ಬಸ್ ಚಾಲಕರೊಬ್ಬರಿಗೆ ಹೃದಯಾಘಾತವಾಗಿದ್ದು, ಈ ವೇಳೆ ಸಮಯಪ್ರಜ್ಞೆ ತೋರಿದ ಹಿನ್ನಲೆಯಲ್ಲಿ ಹಲವು ಮಕ್ಕಳು ಅಪಾಯದಿಂದ ಪಾರಾಗಿದ್ದರು.
ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಸುಮಾರು 65 ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಸಂಚರಿಸುತ್ತಿತ್ತು. ದಾರಿ ಮಧ್ಯೆ ಐವರು ಮಕ್ಕಳನ್ನು ಬಸ್ನಿಂದ ಇಳಿಸಲಾಗಿತ್ತು. ಬಳಿಕ ಸಬ್ ಪೆರಂಪಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಆಲ್ವಿನ್ ಡಿಸೋಜ ಅವರಿಗೆ ಲಘು ಹೃದಯಾಘಾತವಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಬಸ್ ಚಾಲಕ ಬಸ್ನ್ನು ರಸ್ತೆಯ ಬದಿಯ ಚರಂಡಿಗೆ ಸರಿಸಿ ನಿಲ್ಲಿಸಿದ್ದಾರೆ. ಇದರಿಂದ ಬಸ್ನಲ್ಲಿ ಕುಳಿತಿದ್ದ ಕೆಲವು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ