- 16 ಟೆಸ್ಟ್ ಪಂದ್ಯಗಳಲ್ಲಿ 76 ವಿಕೆಟ್ ಪಡೆದಿರುವ ಜಸ್ಪ್ರಿತ್ ಬುಮ್ರಾ
- ಜನವರಿ 7 ರಿಂದ ಭಾರತ & ಆಸ್ಟ್ರೇಲಿಯಾ ನಡುವೆ 3ನೇ ಟೆಸ್ಟ್ ಪಂದ್ಯ ಟೀಮ್
ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ, ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರೆ ಗವಾಸ್ಕರ್ ಟ್ರೋಫಿ ಟಸ್ಟ್ ಸರಣಿಯಲ್ಲಿ ಎಲ್ಲರ ಮನ ಸೆಳೆದಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
2018ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಜಸ್ಪ್ರಿತ್ ಬುಮ್ರಾ, ವೃತ್ತಿ ಜೀವನದ ಮೂರೇ ವರ್ಷಗಳಲ್ಲಿ ಆಡಿದ 16 ಪಂದ್ಯಗಳಿಂದ 76 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಭಾರತ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿ ಬೆಳೆದಿದ್ದಾರೆ.
ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಂದು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿರುವ ಅಹಮದಾಬಾದ್ ಮೂಲದ ವೇಗಿ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜತೆ ಕಾರ್ಯ ನಿರ್ವಹಿಸಿದ್ದಾರೆ.
ಪಿಟಿಐಗೆ ಜತೆ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ವೇಗದ ಬೌಲಿಂಗ್ ವಿಭಾಗದ ನಾಯಕನಾಗಿ ಬುಮ್ರಾ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಮತ್ತು ಒತ್ತಡದ ಸನ್ನಿವೇಶದಲ್ಲಿ ತಂಡ ಕೆಳಗಿರುವಾಗಲೆಲ್ಲಾ ಅವರೇ ಮುಂಚೂಣಿಯಾಗಿ ನಿಲ್ಲುತ್ತಾರೆ. ಇದು ಚಾಂಪಿಯನ್ ಬೌಲರ್ನ ಲಕ್ಷಣ,” ಎಂದು ಗುಣಗಾನ ಮಾಡಿದರು.