ಶಿವಮೊಗ್ಗ ಡಿಸಿಸಿ ಬ್ಯಾಂಕ್ಗೆ ಜೂ.28ರಂದು ಮತದಾನ
– ಲೋಕಸಭೆ ಚುನಾವಣೆ ಪೂರ್ವದಲ್ಲಿ ಮತದಾನ ನಡೆಸಲು ವೇಳಾಪಟ್ಟಿ ಪ್ರಕಟ: ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
– ಸಹಕಾರ ಕ್ಷೇತ್ರದಲ್ಲಿ ಮ್ಯಾಜಿಕ್ ನಡೆಯುತ್ತಾ?
NAMMUR EXPRESS NEWS
ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)ನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಜೂ.28ರಂದು ಮತದಾನ ನಡೆಯಲಿದೆ. ಬ್ಯಾಂಕ್ನ 13 ನಿರ್ದೇಶಕ ಸ್ಥಾನಗಳಿಗೆ ಲೋಕಸಭೆ ಚುನಾವಣೆ ಪೂರ್ವದಲ್ಲಿ ಮತದಾನ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಲೋಕಸಭೆ ಚುನಾವಣೆಗೆ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಹಕಾರ ಬ್ಯಾಂಕ್ಗಳ ಎಲ್ಲ ಚುನಾವಣೆಗಳನ್ನು ಮುಂದೂಡಿತ್ತು.
ಚುನಾವಣೆ ರಿಟರ್ನಿಂಗ್ ಅಧಿಕಾರಿಯೂ ಆದ ಉಪ ವಿಭಾಗಧಿಕಾರಿ ಜಿ.ಎಚ್.ಸತ್ಯನಾರಾಯಣ್ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಜೂ.10ರಂದು ನೂತನ ನಾಮಪತ್ರಗಳನ್ನು ಜೂನ್ 12ರಿಂದ 20ರ ವರೆಗೆ ಸಲ್ಲಿಸಬಹುದಾಗಿದೆ. ಅಗತ್ಯವಾದಲ್ಲಿ ಜೂ.28ರಂದು ಬ್ಯಾಂಕ್ ಆವರಣದಲ್ಲಿ ಮತದಾನ ನಡೆಯಲಿದೆ. ಮತದಾನ ಮುಕ್ತಾಯದ ಬಳಿಕ ಮತ ಎಣಿಕೆ ಆರಂಭವಾಗಲಿದೆ. ಈ ಎಲ್ಲ ಪ್ರಕ್ರಿಯೆಗಳು ಬ್ಯಾಂಕ್ ಪ್ರಧಾನ ಕಚೇರಿ ಆವರಣದಲ್ಲಿ ನಡೆಯಲಿದೆ.
ಯಾವತ್ತು ಏನೇನು?
ನಾಮಪತ್ರ ಸಲ್ಲಿಕೆ ಆರಂಭ – ಜೂ 12
ನಾಮಪತ್ರ ಸಲ್ಲಿಕೆಗೆ ಕಡೇ ದಿನ -ಜೂ. 20
ನಾಮಪತ್ರ ಪರಿಶೀಲನೆ -ಜೂ .21
ನಾಮಪತ್ರ ಹಿಂತೆಗೆದುಕೊಳ್ಳುವುದು -ಜೂ.22
ಮತದಾನ ಮತ್ತು ಎಣಿಕೆ – ಜೂ .28