-ಮನೆಯೇ ಮೊದಲ ಪಾಠಶಾಲೆ ಆಗಲಿ
-ಪೋಷಕರ ವರ್ತನೆ ಮಕ್ಕಳಿಗೆ ಪೂರಕವಾಗಿರಲಿ
ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕವಾಗಿ ಅವರನ್ನುಸದೃಢವಾಗಿಸಬೇಕು.ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮಕ್ಕಳು ಮನೆಯಲ್ಲಿರುವ ತಂದೆ-ತಾಯಿ, ಸಂಬಂಧಿಕರನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಅವರ ಮಾನಸಿಕ ಬೆಳವಣಿಗೆಗೆ ಒಂದು ಒಳ್ಳೆಯ ವಾತಾವರಣ ನೀಡಬೇಕು.
ಹೆತ್ತವರು ಹಾಗೂ ಮನೆಯವರು ತಮ್ಮ ಸಿಟ್ಟು, ಕೋಪವನ್ನು ನಿಯಂತ್ರಿಸಿಕೊಳ್ಳುವುದು ಕೂಡ ಮಹತ್ವವಾಗಿರುತ್ತದೆ. ಮಕ್ಕಳ ಮುಂದೆ, ಜಗಳವಾಡುವುದು, ಇನ್ನೊಬ್ಬರ ಕುರಿತು ಚಾಡಿ ಮಾತನಾಡುವುದು, ಸುಳ್ಳನ್ನಾಡುವುದರಿಂದ ಅವರು ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಾರೆ. ಹಾಗಾಗಿ ಅವರಿಗೆ ತಪ್ಪಿನ ಅರಿವು ಮೊದಲೇ ಮೂಡಿಸಬೇಕು.
ಇನ್ನೊಬ್ಬರನ್ನು ಕ್ಷಮಿಸುವ, ಕಷ್ಟದಲ್ಲಿಯೂ ಭರವಸೆಯನ್ನು ಕಳೆದುಕೊಳ್ಳದ ಶಿಕ್ಷಣ ಮನೆಯಿಂದಲೇ ಶುರುವಾಗಬೇಕು. ಹಾಗೇ ಅವರನ್ನು ಎಲ್ಲರ ಜತೆ ಬೆರೆಯುವುದಕ್ಕೆ ಬಿಡಬೇಕು. ಆಗ ಅವರಿಗೆ ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬುದು ತಿಳಿಯುತ್ತದೆ