ಕರ್ಕಶ ಹಾರ್ನ್ ಹಾಕಿದ್ರೆ ಭಾರೀ ದಂಡ!
– ಉಡುಪಿ: ಕರ್ಕಶ ಹಾರ್ನ್ ಗಡುವು ಮುಗಿದ ಹಿನ್ನೆಲೆ
– ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿ ದಂಡ ವಿಧಿಸಿದ ಪೊಲೀಸರು
NAMMUR EXPRESS NEWS
ಉಡುಪಿ: ಕರ್ಕಶ ಹಾರ್ನ್ ತೆರವುಗೊಳಿಸಲು ಸಂಚಾರ ಪೊಲೀಸರು ನೀಡಿರುವ ಗಡುವು ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಉಡುಪಿ ಸಿಟಿ ಬಸ್ ಗಳಿಗೆ ದಂಡ ವಿಧಿಸಲಾಯಿತು.
ಜೂ.3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್ಗಳಲ್ಲಿ ಅಳವಡಿಸಲಾದ ಕರ್ಕಶ ಹಾರ್ನ್ಗಳನ್ನು ಜೂ.15ರೊಳಗೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು.
ಅದರಂತೆ ಗಡುವು ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಸುದರ್ಶನ್ ದೊಡ್ಡಮನಿ ನೇತೃತ್ವದಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಏಳು ಬಸ್ಳಲ್ಲಿದ್ದ ಕರ್ಕಶ ಹಾರ್ನ್ಗಳನ್ನು ತೆರವುಗೊಳಿಸಲಾಯಿತು.
ಕರ್ಕಶ ಹಾರ್ನ್ ಅಳವಡಿಸಿದ್ದ ಬಸ್ ಗಳ ವಿರುದ್ಧ ತಲಾ 500ರೂ.ನಂತೆ ಒಟ್ಟು 3500ರೂ. ದಂಡ ವಿಧಿಸಲಾಯಿತು. ಎರಡನೇ ಬಾರಿಗೆ 1000ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.
ಈ ಕಾರ್ಯಾ ಚರಣೆ ಮತ್ತೆ ಮುಂದುವರೆಯಲಿದೆ ಎಂದು ಎಸ್ಸೈ ಸುದರ್ಶನ್ ತಿಳಿಸಿದ್ದಾರೆ.