ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಒಳಿತು? ಯಾವ ರಾಶಿಯವರಿಗೆ ಕೆಡುಕು?
NAMMUR EXPRESS NEWS
2024 ಜೂನ್ 19ರ ಬುಧವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?
** ಮೇಷ ರಾಶಿ :
ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಇದಕ್ಕಾಗಿ ಅಪಮಾನೂ ಆಗಬಹುದು. ಆರ್ಥಿಕವಾಗಿ ನಿಮ್ಮನ್ನು ಯಾರಾದರೂ ಕೇಳಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ದೀರ್ಘಕಾಲದ ಬಂಧಗಳು ಮುಕ್ತಾಯವಾಗುವುದು. ಸ್ತ್ರೀಯರಿಗೆ ಶುಭವಾರ್ತೆಯೊಂದು ಬರಲಿದೆ. ಅಂಜಿಕೆಯಿಲ್ಲದೇ ನೀವು ಮಾಡುವ ಕಾರ್ಯದಲ್ಲಿ ಮುನ್ನುಗ್ಗಿ. ಇನ್ನೊಬ್ಬರ ಕಲಹದಿಂದ ನೆಮ್ಮದಿಯನ್ನು ಕಾಣುವುದು ಬೇಡ.
** ವೃಷಭ ರಾಶಿ :
ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ಹಣಕಾಸನ್ನು ಹೊಂದಿಸುವುದು ಇಂದು ಕಷ್ಟವಾಗುವುದು. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ಯಾವುದರಲ್ಲಿಯೂ ಸಂತೃಪ್ತಿ ಇರದು. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ.
** ಮಿಥುನ ರಾಶಿ :
ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ಏನೇ ಆದರೂ ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ನಷ್ಟವನ್ನು ಮರೆಮಾಚಲು ತಂತ್ರವನ್ನು ಹೂಡುವಿರಿ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ನೀವು ದೇವರ ಮೊರೆ ಹೊಗುವಿರಿ. ಪಿತ್ರಾರ್ಜಿತ ಚರಾಸ್ತಿಯನ್ನು ಸುತ್ತಿ ಬಳಸಿ ಕೇಳುವಿರಿ. ಭೂಮಿಯ ವ್ಯವಹಾರವನ್ನು ನೋಡಿಕೊಳ್ಳುವವರಿಗೆ ಅಧಿಕ ಲಾಭವಿದೆ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು.
** ಕಟಕ ರಾಶಿ :
ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಮನೆಯ ಕೆಲಸದಲ್ಲಿ ಆಸಕ್ತಿ ಹೆಚ್ಚಿರುವುದು. ಇದರಿಂದ ತುರ್ತು ಕೆಲಸಗಳನ್ನು ಮರೆಯಬಹುದು ಸಿಟ್ಟಿನಿಂದ ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬುದನ್ನು ಬಿಡಿ. ಪ್ರೀತಿಯಿಂ ಸರಿ ಮಾಡುವ ವಿಧಾನವನ್ನು ಕಂಡುಕೊಳ್ಳಿ. ನಿಮ್ಮಮೆಲೆಯೂ ಪ್ರೀತಿ ಬರಬಹುದು. ಎದುರಾಳಿಯ ಬಲವನ್ನು ಕಂಡು ಯುದ್ಧಸಾರಬೇಕು. ನಮ್ಮ ಬಳಿ ಇರುವ ವಸ್ತು, ವ್ಯಕ್ತಿಗಳ ಮೇಲಲ್ಲ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಯಾವುದರಿಂದಲೂ ಬಿಡುಗಡೆ ಸಿಗದೇ ನೀವು ಸ್ವತಂತ್ರರಾಗಲಾರಿರಿ.
** ಸಿಂಹ ರಾಶಿ :
ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ನಿಮ್ಮ ಶ್ರಮಕ್ಕೆ ಕೂಡಲೇ ಫಲ ಸಿಗುತ್ತದೆ ಎನ್ನುವ ಧಾವಂತ ಬೇಡ. ತಾಳ್ಮೆಯ ಅವಶ್ಯಕತೆ ಇದೆ. ದಾಂಪತ್ಯದಲ್ಲಿ ಮಕ್ಕಳು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಆರ್ಥಿಕಸ್ಥಿಯನ್ನು ಬಲ ಮಾಡಿಕೊಳ್ಳಲು ನಿಮ್ಮ ಪ್ರಯತ್ನ ಎಂದಿನಂತೆ ಇರಲಿದೆ. ಮಾತುಗಳಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಮರೆತು, ತಾಳ್ಮೆ, ಮೌನದಿಂದ ಸಾಧ್ಯ ಎಂಬುದನ್ನು ನಂಬಿ. ಅವರ ಸಲಹೆಯನ್ನು ಸ್ವೀಕರಿಸಿ ಕ್ರಮಬದ್ಧವಾಗಿ ಆಚರಿಸಿ.
** ಕನ್ಯಾ ರಾಶಿ :
ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಸ್ಪಷ್ಟತೆಯ ಜೊತೆ ಮುಂದೆ ಸಾಗಿರಿ. ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ದೂರಾಗಿ ಮಂಗಲಕಾರ್ಯವು ನಿರ್ವಿಘ್ನವಾಗಿ ಸಾಗುವುದು. ಸ್ನೇಹಿತರು ನಿಮಗೆ ಓಡಾಟಕ್ಕೆಂದು ಸ್ವಂತವಾಹನವನ್ನು ಕೊಟ್ಟಾರು. ಇನ್ನೊಬ್ಬರ ವ್ಯವಹಾರವನ್ನು ಕೆಡಿಸಲು ಹೋಗಬೇಡಿ. ಭೂ ವ್ಯವಹಾರವು ಇತ್ಯರ್ಥ ಆಗುವುದು ಕಷ್ಟ. ಚೆನ್ನಾಗಿ ಮಾತನಾಡುತ್ತೇನೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ನಗುಮುಖದಿಂದ ಇಂದು ಇದ್ದರು ನಿಮ್ಮ ಬಳಿ ಅನೇಕರು ಮಾತನಾಡಲು ಬರಬಹುದು.
** ತುಲಾ ರಾಶಿ :
ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ನಿಮ್ಮ ಪ್ರಯತ್ನಗಳು ಬದಲಾಗಲಿ. ಕುಟುಂಬದಲ್ಲಿ ಮನಸ್ತಾಪವು ಸ್ಫೋಟವಾಗಲಿದೆ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಬೈಗುಳ ಸಿಗಬಹುದು. ಸ್ವಂತ ವಾಹನದಲ್ಲಿ ದೂರ ಪ್ರಯಾಣವನ್ನು ಇಂದು ಮಾಡುವಿರಿ. ಸ್ನೇಹಿತರ ಕೆಟ್ಟ ಕೆಲಸದಿಂದ ನಿಮಗೆ ಸಂಕಷ್ಟವಾಗಬಹುದು. ಗೊತ್ತಿಲ್ಲದೇ ದುರಭ್ಯಾಸಕ್ಕೆ ಶರಣಾಗುವಿರಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನೀವು ನಿಮ್ಮ ನಿಲುವನ್ನು ಬದಲಾಯಿಸಬೇಡಿ.
** ವೃಶ್ಚಿಕ ರಾಶಿ :
ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಬಳಸುವರು. ಮಕ್ಕಳ ಕಡೆ ಗಮನ ಹೆಚ್ಚು ಬೇಕಾಗುವುದು. ಮನಶ್ಚಾಂಚಲ್ಯದ ಮೇಲೆ ನಿಯಂತ್ರಣ ಬೇಕಾದರೆ ಧ್ಯಾನವನ್ನು ಮಾಡಿ. ನೂತನ ಸ್ಥಳವನ್ನು ಖರೀದಿಸುವ ಯೋಜನೆ ಮಾಡುವಿರಿ. ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ. ಇಂದು ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ಕಾರ್ಯದಲ್ಲಿ ವೇಗವಿಲ್ಲದೇ ನಿಧನಾವಾಗುವುದು. ಬಂಧುಗಳ ಸಹವಾಸದಿಂದ ನಿಮಗೆ ಉತ್ತಮ ಮಾರ್ಗವು ಸಿಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು.
** ಧನುಸ್ಸು ರಾಶಿ :
ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ಮನೆಗೆ ಖರ್ಚು ಮಾಡುವಾಗ ನಿಮ್ಮ ಆರ್ಥಿಕಸ್ಥಿತಿಯನ್ನೂ ಗಮನಿಸಿ. ಇಂದು ನಿಮ್ಮ ಪರೀಕ್ಷೆಗೆಂದು ಕೆಲವು ಘಟನೆಗಳು ನಡೆಯಬಹುದು. ಅದನ್ನು ಸರಿಯಾಗಿ ನಿಭಾಯಿಸಿ. ಕಛೇರಿಯಲ್ಲಿ ನಿಮಗೆ ಉತ್ಸಾಹದ ಸ್ವಾಗತ ಸಿಗಲಿದೆ. ನಿಮ್ಮಿಂದ ದೂರಹೋದವರ ಬಗ್ಗೆ ಅತಿಯಾದ ಆಸಕ್ತಿ ಬೇಡ. ಮಕ್ಕಳು ನಿಮಗೆ ಸಂತೋಷವನ್ನು ಕೊಡುವರು. ಅವರ ಜೊತೆ ಸಮಯವನ್ನು ಕಳೆಯಿರಿ. ಅತಿಯಾದ ಆಸೆಬುರುಕುತನ ಒಳ್ಳೆಯದಲ್ಲ. ಮನಸ್ಸು ಹೇಳಿದಂತೆ ಕೇಳಬೇಡಿ, ಸಮಾಧಾನದಿಂದ ಇರಿ.
** ಮಕರ ರಾಶಿ :
ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಇನ್ನೊಬ್ಬರನ್ನು ನಿಂದಿಸುವುದು ಬೇಡ. ಅವರೇ ಕರ್ಮದ ಫಲವನ್ನು ಉಣ್ಣುವರು. ನೀವಾಡುವ ಮಾತುಗಳು ನಿಮಗೆ ಖುಷಿ ಕೊಡಬಹುದು. ಅದರೆ ಅದರಿಂದ ಇನ್ನೊಬ್ಬರಿಗೆ ನೋವಾಗುತ್ತದೆ ಎಂಬುದನ್ನೂ ಮರೆಯಬೇಡಿ. ಮನದಲ್ಲಿ ಅವ್ಯಕ್ತವಾದ ಭಯವು ಕಾಡವುದು. ದೇವರ ಸ್ತೋತ್ರಾದಿಗಳನ್ನು ಮಾಡಿ. ವಿದೇಶಕ್ಕೆ ಹೋಗುವ ಅವಕಾಶವು ತಪ್ಪಿಹೋಗುವುಸು. ಅಗತ್ಯವಿದ್ದಷ್ಟೇ ಖರ್ಚು ಮಾಡಿ. ಎಲ್ಲವೂ ಬೇಕೆನಿಸಬಹುದು. ಮನಸ್ಸನ್ನು ಕಡಿಮಾಣ ಹಾಕಿ ನಿಲ್ಲಿಸುವುದು ಉತ್ತಮ.
** ಕುಂಭ ರಾಶಿ :
ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ನಿಮ್ಮಲ್ಲಿ ದೃಢತೆ ಇದ್ದರೆ ಅದು ಸಾಧ್ಯವಿಲ್ಲ. ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಪುಣ್ಯ ಸ್ಥಳಗಳಿಗೆ ನೀವು ಹೋಗುವಿರಿ. ಇನ್ನೊಬ್ಬರು ನಿಮ್ಮ ಶ್ರೇಯಸ್ಸನ್ನು ಸಹಿಸದೇ ಅಸೂಯೆಪಡುವರು. ಮನಸ್ಸಿನಲ್ಲಿಯೇ ಸಂಕಟಪಡುವ ಬದಲು ಅದನ್ನು ಆಪ್ತರಿಗೆ ಹೇಳಿ ಹಗುರಾಗಿ. ಕೃಷಿಕರಿಗೆ ಲಾಭವಾಗುವ ಸಾಧ್ಯತೆ ಇದೆ.
** ಮೀನ ರಾಶಿ :
ಚಿಂತಿಸಿದ ಕೆಲಸವನ್ನು ಪೂರ್ಣಗೊಳಿಸುವ ಸಂತೋಷವು ನಿಮ್ಮದಾಗಲಿದೆ. ಅನ್ಯರಿಗೆ ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಸ್ವಾಭಿಮಾನಿಗಳಾಗಿ ಇರುವಿರಿ. ತಾನು ಹೇಳಿದಂತೆ ನಡೆಯಬೇಕು ಎನ್ನುವ ಮಾನಸಿಕ ಸ್ಥಿತಿಯಿಂದ ಹೊರ ಬನ್ನಿ. ಯಾವುದನ್ನೂ ಹಠದ ಮೂಲಕ ಪಡೆದುಕೊಳ್ಳುವುದು ಬೇಡ. ಹೊಸದಾಗಿ ಸೇರಿದ ಕೆಲಸದಲ್ಲಿ ಗೊಂದಲಗಳಿದ್ದು ಅದನ್ನು ಸರಿಮಾಡಿಕೊಳ್ಳುವಿರಿ. ಇಂದು ನಿಮ್ಮ ಮಹತ್ತ್ವದ ಕಾರ್ಯವು ಕೈಗೂಡಬಹುದು.