ಅಯ್ಯೋ ದೇವರೇ, ಎಂಥಾ ಕಾಲ ಬಂತು..!
– ದೈಹಿಕ ಸುಖಕ್ಕಾಗಿ ಚಿಕ್ಕಮ್ಮನನ್ನೇ ಕತ್ತು ಹಿಸುಕಿ ಕೊಂದ ಎಸ್ಎಸ್ಎಲ್ಸಿ ವಿದ್ಯಾರ್ಥಿ!
– ರಾಜ್ಯವನ್ನೇ ಬೆಚ್ಚಿ ಬೀಳಿಸುವ ಉಪ್ಪಿನಂಗಡಿ ಮಹಿಳೆ ಕೊಲೆ ಪ್ರಕರಣ
– ಮಕ್ಕಳ ಬಗ್ಗೆ ಪೋಷಕರೇ ಇರಲಿ ಎಚ್ಚರ ಎಚ್ಚರ!
NAMMUR EXPRESS NEWS
ಮಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಅತ್ಯಂತ ನೀಚ ಕೃತ್ಯವೊಂದು ಇದೀಗ ವಿದ್ಯಾವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ನಡೆದಿದೆ.
ಎರಡು ದಿನದ ಹಿಂದೆ ಉಪ್ಪಿನಂಗಡಿಯ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ(37) ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದೊಂದು ಕೊಲೆಯೆಂದು ಆರಂಭದಲ್ಲೇ ಸಂಶಯ ಮೂಡಿಸಿದ್ದರೂ ಮನೆಯಲ್ಲಿದ್ದವರು ಹೇಮಾವತಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ನಾಟಕವಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ ಪೊಲೀಸರಿಗೆ ಅತ್ಯಂತ ಹೇಯ ಹಾಗೂ ಬೆಚ್ಚಿ ಬೀಳಿಸುವ ಕೃತ್ಯ ಬೆಳಕಿಗೆ ಬಂದಿದೆ. ಅದೇನೆಂದರೆ ಆ ದಿನ ಮನೆಯಲ್ಲಿದ್ದ ಎಸ್ಎಸ್ಎಲ್ಸಿ ಓದುತ್ತಿರುವ ಹೇಮಾವತಿ ಅವರ ಸ್ವಂತ ಅಕ್ಕನ ಮಗನೇ ಆಕೆಯನ್ನು ದೈಹಿಕ ಸುಖಕ್ಕಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಿಜಕ್ಕೂ ಇಂಥಹ ನಾಗರಿಕ ಸಮಾಜ ತಲೆತಗ್ಗಿಸುವ ನೀಚ ಕೃತ್ಯಗಳನ್ನು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಆದರೆ, ಈ ಕೊಲೆ ರಹಸ್ಯವನ್ನು ಭೇದಿಸಿರುವ ಪೊಲೀಸರಿಗೆ ಮನೆಯಲ್ಲಿದ್ದ ಅಕ್ಕನ ಮಗನೇ ಅದರಲ್ಲಿಯೂ ಅಪ್ರಾಪ್ತ ಬಾಲಕ ಚಿಕ್ಕಮ್ಮನ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಪ್ರಾಣವನ್ನೇ ತೆಗೆದುಬಿಟ್ಟಿರುವ ಕ್ರೂರಿ.
ನಾಗರಿಕ ಸಮಾಜ ಆಧುಕತೆಯ ನಾಗಲೋಟದಲ್ಲಿ ರಕ್ತ ಸಂಬಂಧಗಳನ್ನು ಮರೆತು ಈ ರೀತಿ ಕ್ರೂರ ಮಾನಸಿಕ ಪ್ರವೃತ್ತಿ ನಿಜಕ್ಕೂ ಆತಂಕ ಮೂಡಿಸುವಂಥದ್ದು.
ಬುದ್ದಿ ಹೇಳಿ ಮಲಗಿದ್ದವಳ ಕೊಂದ ಬಾಲಕ!
ಜೂ.16ರ ರಾತ್ರಿ ಹೇಮಾವತಿ ಮನೆಯಲ್ಲಿ ಅಕ್ಕನ ಮಗ ತಂಗಿದ್ದ. ಅವರು ರಾತ್ರಿ ನಿದ್ರೆಗೆ ಜಾರಿದಾಗ ಆಕೆ ಬಳಿ ಬಂದ ಬಾಲಕ ದೈಹಿಕ ಸುಖ ಬಯಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಹೇಮಾವತಿ ಆತನಿಗೆ ಬುದ್ಧಿ ಹೇಳಿ ಬೈದು ಮತ್ತೆ ನಿದ್ದೆಗೆ ಜಾರಿದ್ದರು. ಆದರೆ, ಒಂದುವೇಳೆ ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಚಿಕ್ಕಮ್ಮ ಅಮ್ಮನಿಗೆ ಹೇಳಿದರೆ ಮಾನ ಮರ್ಯಾದೆ ಹಾಳಾಗಬಹುದು ಎನ್ನುವ ಆತಂಕ ಅವನಲ್ಲಿ ಕಾಡಿತ್ತು. ಅದಕ್ಕೆ ಆತ ನಿದ್ರೆಯಲ್ಲಿದ್ದ ಹೇಮಾವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮನೆಯಲ್ಲಿ ಆ ದಿನ ಬಾಲಕನ ತಂದೆ ಕೂಡ ಇದ್ದು, ಯಾವುದೇ ಸಂಶಯ ಬರದ ರೀತಿ ನಡೆದುಕೊಂಡಿದ್ದ. ಬಳಿಕ ಚಿಕ್ಕಮ್ಮ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಕಥೆ ಕಟ್ಟಿದ್ದ. ಅನುಮಾನದ ಮೇಲೆ ಮನೆಯಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಬಾಲಕ ತಾನೇ ಹೇಮಾವತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಕಾನೂನಿನ ಸಂಘರ್ಷ ಎದುರಿಸುತ್ತಿರುವ ಬಾಲಕನನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಿದ್ದಾರೆ.