ಕರ್ನಾಟಕ ಟಾಪ್ 3 ನ್ಯೂಸ್
ಕಾಂಗ್ರೆಸ್ನ 40 ಮಂದಿ ಶಾಸಕರು ಶೀಘ್ರ ರಾಜೀನಾಮೆ
– ಚಿತ್ರದುರ್ಗದಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿಕೆ
ರಾಜ್ಯದಲ್ಲಿ ಶೀಘ್ರ ಬಸ್ ದರ ಹೆಚ್ಚಳ?!
– ಶಕ್ತಿ ಯೋಜನೆಯಿಂದ ಸರ್ಕಾರದಿಂದ ನಿಗಮಕ್ಕೆ 1100 ಕೋಟಿ ಬಾಕಿ
ಹೆಚ್.ಎಸ್. ಆರ್. ಪಿ ನಂಬರ್ ಪ್ಲೇಟ್ ಅಳವಡಿಕೆ
– ಸೆ.15ರವರೆಗೆ ವಿಸ್ತರಣೆ: ಗ್ರಾಹಕರಿಗೆ ಸುವರ್ಣ ಅವಕಾಶ
NAMMUR EXPRESS NEWS
ಚಿತ್ರದುರ್ಗ: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗದ ಹಿನ್ನೆಲೆಯಲ್ಲಿ ಬೇಸತ್ತಿರುವ ಕಾಂಗ್ರೆಸ್ನ 40 ಮಂದಿ ಶಾಸಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ವಿವೇಚನೆ, ಲೆಕ್ಕಾಚಾರ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ನಂತರ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗದೇ ಇರುವುದರಿಂದ ಕಾಂಗ್ರೆಸ್ನ 40 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆದಿದ್ದಾರೆ ಎಂದರು.
ರಾಜ್ಯದಲ್ಲಿ ಶೀಘ್ರ ಬಸ್ ದರ ಹೆಚ್ಚಳ?!
ಶೀಘ್ರ ಬಸ್ ದರ ಹೆಚ್ಚಳ ಮಾಡುವ ಸುಳಿವು ನೀಡಿದ ಸಾರಿಗೆ ಸಚಿವರ ಹೇಳಿಕೆ ಈಗ ಭಾರೀ ಸದ್ದು ಮಾಡಿದೆ. ಶಕ್ತಿಯೋಜನೆಯಿಂದ ಸರ್ಕಾರದಿಂದ ನಿಗಮಕ್ಕೆ 1100 ಕೋಟಿ ಬಾಕಿ ಬರಬೇಕಿದೆ ಎಂದು ಸಾರಿಗೆ ಸಚಿವ ಶ್ರೀರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಹೆಚ್.ಎಸ್. ಆರ್. ಪಿ ನಂಬರ್ ಪ್ಲೇಟ್ ಅಳವಡಿಕೆ: ಸೆ.15ರವರೆಗೆ ವಿಸ್ತರಣೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ವಾಹನ ಸವಾರರಿಗೆ ಮತ್ತೊಂದು ಬಿಗ್ ರಿಲೀಫ್ ನೀಡಲಾಗಿದೆ. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು ಸೆ.15ರವರೆಗೆ ವಿಸ್ತರಿಸಿ ಆದೇಶಿಸಿದೆ.
ಈಗಾಗಲೇ ರಾಜ್ಯ ಸರ್ಕಾರದಿದಂ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಜೂನ್.12ರವರೆಗೆ ಗಡುವು ನೀಡಲಾಗಿತ್ತು.
ಆದ್ರೇ ಅನೇಕ ವಾಹನ ಸವಾರರು ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ. ಹೀಗಾಗಿ ಮತ್ತು ಜುಲೈ.4ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗ ರಾಜ್ಯ ಸರ್ಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಸೆಪ್ಟೆಂಬರ್ 15ರವರೆಗೆ ಅವಧಿ ವಿಸ್ತರಿಸಿ ಆದೇಶಿಸಿದೆ.