ಟಾಪ್ 3 ನ್ಯೂಸ್
ಎಂಜಿನಿಯರಿಂಗ್ ಮಾಡುವ ಕನಸು ಈಗ ನನಸು!
– 8 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟು ಹೆಚ್ಚಳ
ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ..!
– ಸರ್ಕಾರದಿಂದ ಮಹತ್ವದ ಆದೇಶ:
NAMMUR EXPRESS NEWS
ಬೆಂಗಳೂರು : ಎಂಜಿನಿಯರಿಂಗ್ ಮಾಡುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಈ ವರ್ಷ ಹೆಚ್ಚುವರಿಯಾಗಿ ಎಂಟು ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ವಿದ್ಯಾರ್ಥಿಗಳಿಗೆ ಸಿಗಲಿವೆ. ಎಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಇನ್ ಟೇಕ್ ಸಡಿಲಗೊಳಿಸಿದ ಪರಿಣಾಮ ಈ ವರ್ಷ ಎಂಟು ಸಾವಿರಕ್ಕೂ ಹೆಚ್ಚು ಸೀಟುಗಳು ಸಿಗಲಿವೆ. 2024-25ನೇ ಸಾಲಿನ ಎಂಜಿನಿಯರಿಂಗ್ ಪ್ರವೇಶಕ್ಕೆ ಎಲ್ಲ ಮಾದರಿಯ 245 ಎಂಜಿನಿಯರಿಂಗ್ ಕಾಲೇಜುಗಳಿಂದ 1,32,309 ಸೀಟುಗಳ ಇನ್ ಟೆಕ್ ಇದ್ದು, ಈ ಪೈಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 62,930 ಸೀಟುಗಳ ಲಭ್ಯವಾಗಿದೆ. ಈ ವರ್ಷದ ಸೀಟುಗಳನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು 7,758ಸೀಟುಗಳು ಹಾಗೂ ಕೆಇಎ ಪಾಲಿಗೆ 4,085 ಸೀಟುಗಲೂ ಲಭ್ಯವಾಗಿವೆ.
ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ..!
– ಸರ್ಕಾರದಿಂದ ಮಹತ್ವದ ಆದೇಶ: ಮುಷ್ಕರ ಹಾಗೂ ಪ್ರತಿಭಟನೆಗೆ ಬ್ರೇಕ್?
ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ, ಪ್ರತಿಭಟನೆ, ಹರತಾಳ ಹಾಗೂ ಅಸಹಕಾರ ಚಳುವಳಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಆರು ತಿಂಗಳು ಯಾವುದೇ ಸಮಸ್ಯೆಗಳಿದ್ದರೂ ಸಹ ಅವರು ಪ್ರತಿಭಟನೆ ನಡೆಸುವಂತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದು, ಇದು ಸಾರಿಗೆ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾರಿಗೆ ಇಲಾಖೆಯ ನೌಕರರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿಂದೆಯೂ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸತತವಾಗಿ ಹತ್ತಾರು ದಿನ ಮುಷ್ಕರ ನಡೆಸಿದ್ದರು. ಆಗ ಸಾರಿಗೆ ಕಾರ್ಮಿಕರೊಡನೆ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಸಧ್ಯಕ್ಕೆ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಜೊತೆಗೆ, ಶಕ್ತಿ ಯೋಜನೆಗೆ ಹಣ ಹೊಂದಿಸುವ ಸಲುವಾಗಿ ಸಾರಿಗೆ ಇಲಾಖೆ ನೌಕರರ ಹಿತಾಸಕ್ತಿಯನ್ನೂ ಸಹ ಕಡೆಗಣಿಸುತ್ತಿರುವ ಆರೋಪ ಕೇಳಿಬಂದಿದೆ. ಈಗ ಮುಷ್ಕರ ಹಾಗೂ ಪ್ರತಿಭಟನೆ ನಡೆಸುವ ಅವಕಾಶಕ್ಕೂ ಸಹ ತಡೆಯೊಡ್ಡಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಜೆಪಿಗೆ ನಂಟು!
– ಸೀಸ್ ಆದ ಹಣ ಕೊಟ್ಟಿದ್ದು ಬಿಜೆಪಿ ಮುಖಂಡ: ತನಿಖೆ ಶುರು
ಬೆಂಗಳೂರು: ನಟ ದರ್ಶನ್ ಮನೆಯಲ್ಲಿ 70 ರೂ. ವಶಪಡಿಸಿಕೊಂಡ ಹಣದಲ್ಲಿ 40 ಲಕ್ಷ ಹಣ ಕೊಟ್ಟದ್ದು ಮೋಹನ್ ರಾಜ್ ಎಂದು ಕಾಮಾಕ್ಷಿ ಪಾಳ್ಯ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಗೆ ಹಣ ಕೊಟ್ಟಿರುವ ಮೋಹನ್ ರಾಜ್ ಶಾಸಕರೊಬ್ಬರ ಆಪ್ತರು ಎಂದು ತಿಳಿದು ಬಂದಿದೆ. ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜ್ ಎಂಬುವವರು ಪೋನ್ ಸ್ವೀಚ್ ಆಫ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೋಹನ್ ರಾಜ್ ಕೂಡ ಬಿಜೆಪಿ ಪಕ್ಷದೊಡನೆ ಗುರುತಿಸಿಕೊಂಡಿದ್ದಾರೆ.
ಆದರೆ ಈ ಬಗ್ಗೆ ತನಿಖೆ ನಡೆಸುತ್ತಿರುವ ಕಾಮಾಕ್ಷಿ ಪಾಳ್ಯ ಪೊಲೀಸರು, ಮೋಹನ್ ರಾಜ್ ಪೋನ್ ಸ್ವೀಚ್ ಆಫ್ ಆಗಿರುವುದರಿಂದ ಅವರ ಮನೆಗೇ ಹೋಗಿ ನೋಟಿಸ್ ನೀಡಲು ಮುಂದಾಗಿದ್ದಾರೆ. ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಮೇರೆಗೆ ಮನೆಗೆ ಹೋಗಿ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ 70 ಲಕ್ಷ ರೂ.ಗಳಲ್ಲಿ ಎಲ್ಲಿ ಎಲ್ಲಿ ಪಡೆದಿದ್ದರು ಎಂಬ ಮೂಲಗಳನ್ನು ಕೆದಕಿದಾಗ ತಿಳಿದು ಬಂದಿದೆ. ಹತ್ಯೆ ಪ್ರಕರಣದಲ್ಲಿ ಹೆಣ ಸಾಗಿಸಲು 5 ಲಕ್ಷ ರೂ., ರೇಣುಕಾಸ್ವಾಮಿಯನ್ನು ಕರೆ ತರಲು 10 ಲಕ್ಷ ಕೊಟ್ಟಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.