ಟಾಪ್ 3 ನ್ಯೂಸ್ ಕರಾವಳಿ
– ಮೂಲ್ಕಿ: ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರು!
– ಉಪ್ಪಿನಂಗಡಿ: ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ
– ಕಾರ್ಕಳ: ತೆಂಗಿನ ಮರದಿಂದ ಬಿದ್ದು ಸಾವು!
NAMMUR EXPRESS NEWS
ಮಂಗಳೂರು: ಮೂಲ್ಕಿಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಶ್ರೀ ನವದುರ್ಗ ಪ್ರಸಾದ್ ಬಸ್ ನಡುವೆ ಶನಿವಾರ ಬೆಳಗ್ಗೆ ಕೊಲ್ನಾಡ್ ಇಂಡಸ್ಟ್ರಿಯಲ್ ಕ್ರಾಸ್ ನಲ್ಲಿ ಅಪಘಾತವಾಗಿದೆ.
ಇನ್ನೋವಾ ಕಾರು ನವದುರ್ಗ ಬಸ್ ಗೆ ಹಿಂದೆಯಿಂದ ಬಡಿದಿದೆ. ಕೆಲವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.
ಉಪ್ಪಿನಂಗಡಿಯಲ್ಲಿ ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ
– ಫ್ಯಾನ್ಸಿ ಅಂಗಡಿಯೊಂದರಲ್ಲಿ ಭಾರೀ ಬೆಂಕಿ
ಉಪ್ಪಿನಂಗಡಿ: ಉಪ್ಪಿನಂಗಡಿ ಪೇಟೆಯಲ್ಲಿರುವ ಪೃಥ್ವಿ ವಾಣಿಜ್ಯ ಮಳಿಗೆಯ ಫ್ಯಾನ್ಸಿ ಅಂಗಡಿಯೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಪಕ್ಕದಲ್ಲಿನ ಕೆಲವು ಅಂಗಡಿಗಳಿಗೂ ವ್ಯಾಪಿಸಿ ಸಾಕಷ್ಟು ಹಾನಿಯುಂಟು ಮಾಡಿದೆ.
ಪೃಥ್ವಿ ವಾಣಿಜ್ಯ ಮಳಿಗೆಯಲ್ಲಿನ ಅಂಗಡಿ ಮಾಲೀಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಮೊದಲಿಗೆ ಫ್ಯಾನ್ಸಿ ಅಂಗಡಿಯಿಂದ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾರ್ಕಳದಲ್ಲಿ ತೆಂಗಿನ ಮರದಿಂದ ಬಿದ್ದು ಸಾವು!
ಕಾರ್ಕಳ: ಕಾರ್ಕಳ ಶ್ರೀದೇವಿ ಕಾಲೋನಿ ಹತ್ತಿರ ಅಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ನಿವಾಸಿ ಶಂಕರ (50) ಎಂದು ಗುರುತಿಸಲಾಗಿದೆ.
ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಜೂ.19ರಂದು ಲೋಹಿತ್ ಎಂಬವರ ಮನೆಯ ಬಳಿಯ ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಜೂ.21ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಹಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ